ಸಡಗರ ಸಂಭ್ರಮದಿಂದ ಮರಿಯಮ್ಮ ದೇವಿಯ 118 ನೇ ಜಾತ್ರ ಮಹೋತ್ಸವ

ಹುಮನಾಬಾದ್:ಡಿ.28:ತಾಲ್ಲೂಕಿನ ಕಠಳ್ಳಿ ಗ್ರಾಮದ ಐತಿಹಾಸಿಕ ಸೂಪ ಆರಾಧ್ಯ ದೇವಿ ಮರಿಯಮ್ಮ ದೇವಿಯ 118 ನೇ ಜಾತ್ರ ಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ದೇವಿಯ ದರ್ಶನ ಪಡೆದರು .

ಸರ್ವಧರ್ಮದವರ ಪ್ರತಿ ವರ್ಷದಂತೆ ದೇವಿಯ ದರ್ಶನ ಪಡೆದು ನೈವಿದ್ಯ ಅರ್ಪಿಸಿ ಹಾಗೂ ಅರಳಿ ಮರಕ್ಕೆ ಕೆಂಪು ಮತ್ತು ಬಿಳಿ ಧ್ವಜಗಳನ್ನು ಅರ್ಪಿಸಿದರು . ದೇವಿಯ ಭಕ್ತರು ದೇವಾಲಯ ಆವರಣದಲ್ಲಿ ನೈವಿದ್ಯ ತಯಾರಿಸಿ ಭಾ ಭಜಂತ್ರಿಗಳೊಂದಿಗೆ ದೇವಾಲಯದ ಎದುರುಗಡೆ ಇರುವ ಅರಳಿ ಮರಕ್ಕೆ ಪ್ರದಕ್ಷಣೆ ಹಾಕಿ ಧ್ವಜಗಳು ಅರ್ಪಿಸಿದರು .ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು . ಸರತಿ ಸಾಲಿನಲ್ಲಿ ಬಂದು ಭಕ್ತಾದಿಗಳು ದೇವಿಯ ದರ್ಶನ ಪಡೆದರು

ಶ್ರೀ ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಬೇರೆ ಬೇರೆ ರಾಜ್ಯ, ಜಿಲ್ಲೆಯ ಹರಿದು ಬಂದ ಭಕ್ತ ಸಾಗರಕ್ಕೆ ವಿಷೇಶ ದಾಸೋಹ ವ್ಯವಸ್ಥೆ ಸೊಸೆಯ ಸಂಘ ಕಲ್ಪಿಸಲಾಗಿತ್ತು.

ಕಲಬುರಗಿ ಸಂಸದ ಡಾ. ಉಮೇಶ ಜಾದವ್ , ಶಾಸಕ ಸಿದ್ದು ಪಾಟೀಲ್ , ಮಾಜಿ ಸಚಿವ ರಾಜಶೇಖರ್ ಪಾಟೀಲ್, ಆಗಮಿಸಿ ದೇವಿಯ ದರ್ಶನ ಪಡೆದರು . ದೇವಾಲಯದ ಅಧ್ಯಕ್ಷ ಆರ್.ಡಿ. ಪವರ್ , ಉಪಾಧ್ಯಕ್ಷರ ಗುರುನಾಥ ಚವ್ಹಾಣ , ಕಾರ್ಯದರ್ಶಿ ದಯಾನಂದ ಕಾರಬಾರಿ , ಖಜಾಂಚಿ ಕಾಶಿನಾಥ ಕಾರಬಾರಿ , ಶಿವರಾಜ ಪಾಟೀಲ್ , ವೀರಭದ್ರಪ್ಪಾ ಪಾಟೀಲ್ , ಬಾಸ್ ಪಾಟೀಲ್ ಹಾಗೂ ಪಂಚಕಮಿಟಿ ಸದಸ್ಯರು ಉಪಸ್ಥಿತರಿದ್ದರು . ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೆÇಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು . ಜಾತ್ರಾ ಮಹೋತ್ಸವದ ಕೊನೆಯ ದಿನವಾಗಿದ್ದು ಬೆಳಿಗ್ಗೆ ವಿಶೇಷ ಆರತಿ ಕಾರ್ಯಕ್ರಮ ಜರುಗುವುದು