ಸಡಗರ-ಸಂಭ್ರಮದಿಂದ ನೇರವೇರಿತು ಮಕ್ಕಳ ಹಬ್ಬ

ವಾಡಿ:ನ.20: ಮಕ್ಕಳ ಡೊಳ್ಳಿನ ತಂಡ ಆಕರ್ಷಕವಾಗಿ ಡೊಳ್ಳು ಬಾರಿಸುತ್ತಾ ಎನ್.ಸಿ.ಸಿ ಮಕ್ಕಳು ಆಕರ್ಷಕ ಪೆರೆಡ್ ನಿಂದ ಅತಿಥಿಗಳನ್ನು ಸ್ವಾಗತಿಸಿ ಊರ ಮೆರವಣಿಗೆ ರೂಪದಲ್ಲಿ ಗ್ರಾಮದ ಪ್ರಮುಖ ಬೀದಿಯಲ್ಲಿ ಕರೆದುಕೊಂಡು ಬಂದು ನೋಡುಗರ ಗಮನ ಸೆಳೆದರು. ಕಾರ್ಯಕ್ರಮದ ನಿರ್ವಹಣೆ, ಸ್ವಾಗತ, ವಚನ ಗಾಯನ, ವಂದನಾರ್ಪಣೆ, ಆಟಗಳ ಮಹತ್ವ ಕುರಿತು ಎಲ್ಲವನ್ನು ಮಕ್ಕಳೇ ನಿರ್ವಹಿಸಿ ಅತಿಥಿಗಳಿಂದ ಶಬ್ಬಾಷ ಎನಿಸಿಕೊಂಡರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕಲಬುರಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿತ್ತಾಪೂರ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ರಾವೂರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚಾರಣೆ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಜಿಲ್ಲಾ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ) ಸಕ್ರೇಪ್ಪಗೌಡ ಬಿರಾದಾರ ಮಕ್ಕಳೊಂದಿಗೆ ಡೊಳ್ಳು ಬಾರಿಸುತ್ತಾ ಉದ್ಘಾಟಿಸಿದರು.

ನಂತರ ಮಾತನಾಡಿ ನಾನು ಮಾತನಾಡೊದಕ್ಕಿಂತ ಮಕ್ಕಳೊಂದಿ ಮಕ್ಕಳಾಗಿ ಬೆರೆಯುವ ಹಂಬಲವಿದೆ. ಆದರೆ ವಯಸ್ಸು ಮೀರಿದೆ ಆದರೂ ಅವರ ಮಕ್ಕಳ ಹಬ್ಬದಲ್ಲಿ ಸಂತೋಷ ನೋಡಿ ನನಗೂ ಆಟವಾಡುವ ಮನಸ್ಸಗುತ್ತದೆ. ನಿಜಕ್ಕೂ ನಾವೇಲ್ಲಾ ಬಾಲ್ಯದ ನೆನಪುಗಳನ್ನು ಇಂದು ನೆನೆಪಿಸಿಕೊಳ್ಳುತ್ತಿದ್ದೇವೆ. ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೊಸ್ಕರ ಮಕ್ಕಳೆ ನಡೆಸಿಕೊಡುವ ಮಕ್ಕಳ ಹಬ್ಬ ಎಂಬ ಪರಿಕಲ್ಪನೆಯ ಈ ಕಾರ್ಯಕ್ರಮ ತುಂಬಾ ಅದ್ಭುತವಾದದ್ದು ಮಕ್ಕಳಿಗೆ ಮನೊರಂಜನಾತ್ಮ ಕ್ರೀಡೆಗಳನ್ನು ಆಡಿಸುವುದರ ಮೂಲಕ ಬಾಲ್ಯದ ನೆನಪುಗಳು ಮತ್ತು ಅನೇಕ ಕೌಶಲ್ಯಗಳನ್ನು ತುಂಬಲು ಅವಕಾಶವಾಗುತ್ತದೆ.

ಆದ್ದರಿಂದ ಇಂತಹ ಹಬ್ಬಗಳು ಮಕ್ಕಳಿಗಾಗಿ ನಡೆಯಬೇಕು.ಮಕ್ಕಳೇ ನಮಗೆಲ್ಲಾ ಅನ್ನ ಹಾಕುತ್ತಿರುವುದು. ಅವರಿಗಾಗಿಯೆ ಶಿಕ್ಷಕರು ಕೆಲಸ ಮಾಡುವುದು.ಅವರೆ ಇಲ್ಲ ಎಂದರೆ ಅನ್ನ ಬರೋದಾದ್ರು ಎಲ್ಲಿಂದ ಆದ್ದರಿಂದ ಶಿಕ್ಷಕರು ವೃತ್ತಿ ಬದುಕನ್ನು ತನ್ಮಯತೆಯಿಂದ ಮಾಡಬಢಕೆಂದು ಕಿವಿಮಾತು ಹೇಳಿದರು.

ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಶಿಕ್ಷಣ ಅಭಿವೃದ್ದಿ ಉಪನಿದೇರ್ಶಕ ಬಸವರಾಜ ಮಾಯಾಚಾರಿ, ಸಂಸ್ಥೆ ಉಪಾದ್ಯಕ್ಷ ಚನ್ನಣ್ಣ ಬಾಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ, ಡಾ.ಗುಂಡಣ್ಣ ಬಾಳಿ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ, ನಲಿ ಕಲಿ ತಾಲೂಕ ನೊಡೆಲ ಅಧಿಕಾರಿ ಬಸವರಾಜ ಲಿಂಗದಳ್ಳಿ , ವಿಷಯ ಪರಿವೀಕ್ಷಕ ರಮೇಶ ಜಾನಕರ, ಎಸಿಪಿ ಬಸನಗೌಡ, ಕ್ರಸ್ಟ ಸಂಸ್ಥೆ ಜಿಲ್ಲ ಸಂಯೋಜಕ ವಿಶ್ವನಾಥ ಮರತೂರ, ನೌಕರ ಸಂಘದ ತಾಲೂಕ ಅದ್ಯಕ್ಷ ಬಸವರಾಜ ಬಳುಂಡಗಿ, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಶಿವಾನಂದ ನಾಲವಾರ, ಪ್ರಧಾನ ಕಾರ್ಯದರ್ಶಿ ಅಬ್ದುಲ ಸಲೀಂ ಪ್ಯಾರೆ , ಸಿಆರ್‍ಪಿ ಕವಿತಾ ಸಾಳೂಂಕೆ ವೇದಿಕೆ ಮೇಲಿದ್ದರು. ವಿಧ್ಯಾರ್ಥಿನಿಯರಾದ ತಬಸುಮ್ ನಿರೂಪಿಸಿದಳು, ಅಂಬಿಕಾ ಸ್ವಾಗತಿಸಿದಳು, ಸುಕನ್ಯ ವಂದಿಸಿದಳು.