ಸಡಗರ ಸಂಭ್ರಮದಿಂದ ನಡೆದ ಸಂವಿಧಾನ ಜಾಗೃತಿ ಜಾಥ

ಆನೇಕಲ್.ಫೆ.೨೫:ಸಂವಿಧಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥವನ್ನು ಹಮ್ಮಿಕೊಂಡಿದ್ದು ಇಂದು ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂವಿಧಾನ ಜಾಗೃತಿ ಜಾಥ ರಥವು ಆಗಮಿಸುತ್ತಿದ್ದಂತೆ ಸುಮಾರು ೫೦೦ ಜನ ಮಹಿಳೆಯರು ತಲೆ ಪೂರ್ಣ ಕುಂಭ ಕಳಸ ಹೊತ್ತು ರಥಕ್ಕೆ ಭವ್ಯ ಸ್ವಾಗತ ಕೋರಿದರು ಹಾಗೂ ಜನ ಪ್ರತಿನಿಧಿಗಳು, ಅಂಬೇಡ್ಕರ್ ಅನುಯಾಯಿಗಳು ಗ್ರಾಮಸ್ಥರು ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಜೈಕಾರ ಹಾಕಿದರು.
ಇದೇ ಸಂಧರ್ಭದಲ್ಲಿ ಹಲವು ಕಲಾ ತಂಡಗಳೊಂದಿಗೆ, ಬೈಕ್ ರ್‍ಯಾಲಿ ಮೂಲಕ ಹಾಗೂ ಅಂಬೇಡ್ಕರ್ ಕುರಿತು ಡಿಜೆ ಮೂಲಕ ಸಂವಿಧಾನ ಜಾಗೃತಿ ಜಾಥ ರಥವು ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಾಚಮಾರನಹಳ್ಳಿ, ಮುಳ್ಳೂರು, ಕೊಡತಿ ಗೇಟ್ ಮೂಲಕ ಕೊಡತಿ ಗ್ರಾಮ ಪಂಚಾಯಿತಿ ಕಛೇರಿ ಬಳಿಗೆ ಸಂವಿದಾನ ಜಾಗೃತಿ ರಥವು ಬಂದು ತಲುಪಿತು.ಇದೇ ಸಂಧರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿಧರ್ ರವರು ಸಂವಿಧಾನದ ಪೀಠಿಕೆಯನ್ನು ಓದಿ, ನಂತರ ಎಲ್ಲರ ಕೈಯಲ್ಲಿ ಓದಿಸಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಕೊಡತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಂಜುನಾಥ್ ರವರು ವಹಿಸಿದ್ದರು.
ಕೊಡತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕೃಷ್ಣವೇಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ(ಬಾಬು),ಕೊಡತಿ ಗ್ರಾಮದ ಸದಾಶಿವ ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್, ರಾಮಸ್ವಾಮಿ, ಶಿವಕುಮಾರ್, ನಂಜುಂಡರೆಡ್ಡಿ, ವೀಣಾ ರವಿ, ಆಶಾ ಚಿಟ್ಟಿಬಾಬು, ನಳಿನಾಕ್ಷಿ, ಎಸ್.ಕೆ. ರಮೇಶ್, ಅಂತೋಣಿಮೇರಿ, ಮುನಿರಾಜು, ಸುಮಿತ್ರ ಜನಾರ್ದನ, ಸಂತೋಷ್, ರಘು, ಮಮತಾ, ಶುಭ ನರೇಂದ್ರಬಾಬು, ಬಾಬುರೆಡ್ಡಿ, ರಾಧಾ ಕಾವೇರಪ್ಪ, ಮತ್ತು ಶೃತಿ ಸತೀಶ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಬಾಗವಹಿಸಿದ್ದರು.