ಸಡಗರ ಸಂಭ್ರಮದಿಂದ ಗುರುಭದ್ರೇಶ್ವರ ರಥೋತ್ಸವ

ಹುಮನಾಬಾದ್:ಮಾ.12:ತಾಲೂಕಿನ ಇಟಗಾ ಗ್ರಾಮದ ಶಿವಸಿದ್ದ ಯೋಗಾಶ್ರಮ ಶಾಖಾಮಠದ ಗುರು ಭದ್ರೇಶ್ವರರ 47ನೇ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಸಂಜೆ ಸಡಗರ ಸಂಭ್ರಮದ ರಥೋತ್ಸವ ಜರುಗಿತು . ಜಾತ್ರಾ ಮಹೋತ್ಸವ ನಿಮಿತ್ತ ಮಂದಿರದಲ್ಲಿ ಬೆಳಗ್ಗೆ ವಿಶೇಷ ಪೂಜಾಭಿಷೇಕ, ಮಹಾಮಂಗಳಾರತಿ, ಧರ್ಮಸಭೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಶಾಸಕ ಡಾ. ಸಿದ್ದು ಪಾಟೀಲ್ ಸೇರಿ ವಿವಿಧ ರಾಜಕೀಯ ಧುರೀಣರು ಗಣ್ಯರು ಮಠಕ್ಕೆ ಆಗಮಿಸಿ ದರ್ಶನ ಪಡೆದುಕೊಂಡರು. ಶಿವಸಿದ್ಧ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಭರತನೂರ ವಿರಕ್ತಮಠದ ಚಿಕ್ಕಗುರು ನಂಜೇಶ್ವರ ಸ್ವಾಮೀಜಿ, ಹಿರೇಮುನ್ನಳ್ಳಿ ಶಂಭುಲಿಂಗ ಶಿವಾಚಾರ್ಯರು, ಇಂದ್ರಣ್ಣ ಮೈಲೂರ, ವೀರಶೆಟ್ಟಿ ಪಾಟೀಲ್, ಬಸವರಾಜ ಪಾಟೀಲ್, ರಾಜಣ್ಣ ಹುಡಗೀಕರ್, ಗೌರಿಶಂಕರ ಪಾಟೀಲ್, ಸೇರಿ ಅನೇಕ ಭಕ್ತರು ಹಾಗೂ ಗಣ್ಯರು ಇದ್ದರು.