ಸಡಗರ ಸಂಭ್ರಮದಿಂದ ಇಂಜಿನಿಯರ್ ದಿನಾಚರಣೆ

ಬೀದರ :ಸೆ.18: ಸರ್.ಎಂ. ವಿಶ್ವೇಶ್ವರಯ್ಯನವರು ದೇಶ ಕಂಡ ಶ್ರೇಷ್ಠ ಇಂಜಿನಿಯರ್ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡುವ ಸಾಮ್ಯಾರ್ಥದ ಅಣೆಕಟ್ಟುಗಳು ನಿರ್ಮಾಣ ಕಾರ್ಯದಲ್ಲಿ ದೇಶಾದ್ಯಂತ ಛಾಪು ಮೂಡಿಸುವಲ್ಲಿ ವಿಶ್ವೇಶ್ವರಯ್ಯನವರ ಪ್ರಮುಖ ಪಾತ್ರ ಮತ್ತು ಸಾಧನೆಗೈದಿದ್ದಾರೆಂದು ವಿಶ್ವೇಶ್ವರನವರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಅಸೋಸಿಯೇಶನ್ ಆಫ್ ಕನ್ಸ್‍ಲ್ಟಿಂಗ್ ಸಿವಿಲ್ ಇಂಜಿನಿಯರ್ ಅಧ್ಯಕ್ಷ ಅಶೋಕ ಉಪ್ಪೆಯವರು ತಿಳಿಸಿದ್ದಾರೆ.

ಅವರು ಬೀದರ ನಗರದಲ್ಲಿ ಬಸವೇಶ್ವರ ವೃತ್ತದಿಂದ ಡಾ. ಚನ್ನಬಸವೇಶ್ವರ ಪಟ್ಟದ್ದೇವರ ರಂಗಮಂದಿರದವರೆಗೆ ಭವ್ಯ ಮೇರವಣಿಗೆಯೊಂದರ ಹೂವಿನಿಂದ ಅಲಂಕೃತ ವಾಹನದಲ್ಲಿ ವಿಶ್ವೇಶ್ವರಯ್ಯ ಭಾವಚಿತ್ರ ಮೇರವಣಿಗೆಯನ್ನು ಅದ್ದೂರಿಯಾಗಿ ಇದರ ಜೊತೆಗೆ ಡೊಳ್ಳು ಕುಣಿತ ಹಾಗೂ ಸಾಂಸ್ಕøತಿಕ ಕಲಾತಂಡಗಳು ಈ ಮೇರವಣಿಗೆಗೆ ಮೆರುಗು ತಂದುಕೊಟ್ಟಿದ್ದವು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಸ್.ಪಿ ಅಂಚುರಿ ಅವರು ಮಾತನಾಡಿ ದೇಶದಲ್ಲಿ ಇಂಜಿನಿಯರುಗಳ ಪಾತ್ರ ಬಹುಮುಖ್ಯವಾಗಿದೆ. ಮನೆ ವಿಲಾಗಳನ್ನು ಕಟ್ಟುವಾಗ ಗಾಳಿ ಮತ್ತು ಬೆಳಕು ಬರುವಂತೆ ಮನೆಯನ್ನು ಕಟ್ಟಬೇಕೆಂದು ಸಲಹೆ ನೀಡಿದರು. ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ಸಿದ್ರಾಮಪ್ಪಾ ಎಸ್.ಆವಂತಿ ಯವರು ವಿಶ್ವೇಶ್ವರಯ್ಯನವರ ಜೀವನ ಚರಿತ್ರೆಯನ್ನು ಎಲ್ಲರ ಮನಮುಟ್ಟುವಂತೆ ತಿಳಿಹೇಳಿದರು.

ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಮೇರವಣಿಗೆಗೆ ಚಾಲನೆ ನೀಡಿದರು. ಮೇರವಣಿಗೆಯಲ್ಲಿ ಮುಖಂಡರಾದ ಗುರುನಾಥ ಕೊಳ್ಳೂರು, ವಿಜಯಕುಮಾರ ಪಾಟೀಲ ಗಾದಗಿ, ಕಾರ್ಯದರ್ಶಿ ದಿಲೀಪ ನಿಟ್ಟೂರೆ, ಪ್ರಕಾಶ ಟೊಣ್ಣೆ, ಹಾವಶೆಟ್ಟಿ ಪಾಟೀಲ, ರವಿ ಮೂಲಗೆ , ವೀರಶೆಟ್ಟಿ ಮಣಗೆ, ಮಾಧವ ಜೋಶಿ, ಅನೀಲ ಔರಾದೆ, ಅನೀಲ ಖೇಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.