ಸಡಗರದ ಭೀಮಾಂಬಿಕಾದೇವಿ ರಥೋತ್ಸವ

ನರೇಗಲ್ಲ,ಏ16 : ಸಮೀಪದ ನಿಡಗುಂದಿ ಗ್ರಾಮದಲ್ಲಿ ಭೀಮಾಂಬಿಕಾದೇವಿ ಮಹಾರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ನಿಡಗುಂದಿಕೊಪ್ಪ ಗ್ರಾಮದಿಂದ ರಥದ ಹಗ್ಗವನ್ನು ಸಕಲ ವಾದ್ಯ ವೃದದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸಲಿಂಗ ಸ್ವಾಮೀಜಿ, ಧರ್ಮರ ಮಠದ ಶಣ್ಮುಖಪ್ಪಜ್ಜನವರು, ಇಲಕಲ್ಲನ ಅನ್ನದಾನೇಶ್ವರ ಶಾಸ್ತ್ರೀಗಳು, ಗದಗ ಹಿರೇಮಠದ ಚಂದ್ರಶೇಖರ ದೇವರು ಸೇರಿದಂತೆ ಹರೆ, ಗುರು, ಚರ ಮೂರ್ತಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದ ಭಕ್ತರು ಭೀಮಾಂಬಿಕಾದೇವಿ ಮಾತಾಕೀ ಜೈ ಎಂದು ಘೋಷಣೆ ಕೂಗಿ ರಥೋತ್ಸವದಲ್ಲಿ ಭಾಗಿಯಾದರು.
ಭೀಮಾಂಬಿಕಾದೇವಿ ರಥೋತ್ಸವವು ಪಾದಗಟ್ಟಿ ತೆರಳಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು. ನರೇಗಲ್ಲ, ಅಬ್ಬಿಗೇರಿ, ನಿಡಗುಂದಿಕೊಪ್ಪ, ಹಾಲಕೆರೆ ಮಾರನಬಸರಿ, ಜಕ್ಕಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.