ಸಡಗರದ ಗುರು ಪೌರ್ಣಿಮಾ

ಆನೇಕಲ್, ಜು.೨೪:ಚಂದಾಪುರ ಸಮೀಪದಲ್ಲಿರುವ ಸನ್ ಪ್ಯಾಲೇಸ್ ಕಲ್ಯಾಣ ಮಂಟಪದ ಆವರಣದಲ್ಲಿ ಶಿವಾಲಯ ನಾಟ್ಯ ಮಂದಿರ ವತಿಯಿಂದ ಗುರು ಪೌರ್ಣಮಿ ಹಾಗೂ ಗೆಜ್ಜೆ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಶೇಷವಾಗಿ ಶಿವಾಲಯ ನಾಟ್ಯ ಮಂದಿರ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಭರತನಾಟ್ಯ, ಶಾಸ್ತೀಯ ಸಂಗೀತ ಕಲಿತ ವಿದ್ಯಾರ್ಥಿಗಳಿಗೆ ಶಾಸ್ತೋತ್ತವಾಗಿ ಶಿವಾಲಯ ಆಟ್ಸ್ ಅಂಡ್ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಮಂಜುಳ ಜಗದೀಶ್ ರವರು ವಿದ್ಯಾರ್ಥಿಗಳಿಗೆ ಗೆಜ್ಜೆಯನ್ನು ವಿತರಿಸಿದರು.
ಇನ್ನು ರಾಷ್ಠೀಯ ಸ್ವಯಂ ಸೇವಾ ಸಂಘದ ಹಿರಿಯ ಪ್ರಚಾರಕರಾದ ಪಾ.ರ. ಕೃಷ್ಣಮೂರ್ತಿ, ನಿವೃತ್ತ ಯೋದರಾದ ಮುತ್ತಾನಲ್ಲೂರು ಮೇಜರ್ ಎನ್. ರಘುರಾಮರೆಡ್ಡಿ, ಬಾರತ್ ರಕ್ಷಕ್ ಪೌಂಡೇಶನ್ ನ ಕಲಾವಿದ ನಿರ್ದೇಶಕಿಯಾದ ಡಾ|| ಜಯಶ್ರೀ ರವಿ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿವಾಲಯ ಆಟ್ಸ್ ಅಂಡ್ ಕಲ್ಚರಲ್ ಟ್ರಸ್ಟ್ ನ ಕಾರ್ಯದರ್ಶಿ ಕೆ. ಜಗದೀಶ್, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.