ಸಡಗರದಿಂದ ನಡೆದ ವೀರಭದ್ರೇಶ್ವರ ರಥೋತ್ಸವ

ಹುಮನಾಬಾದ್ :ಜ.22:ಪಟ್ಟಣದ ಹೊರ ವಲಯದ ಬಸವತೀರ್ಥ ಕ್ಷೇತ್ರದ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಶನಿವಾರ ನಡೆದ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವಕ್ಕೆ
ಬಿಜೆಪಿ ಮುಖಂಡ ಸಿದ್ದು ಪಾಟೀಲ್ ಚಾಲನೆ ನೀಡಿದರು.

ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನದಂತೆ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಗೆ ಕಾರ್ಯಕ್ರಮಲ್ಲಿ ಭಕ್ತರು ವೀರಭದ್ರೇಶ್ವರ ದೇವರಿಗೆ ಜಯವಾಗಲಿ, ವೀರಭದ್ರ ಮಹಾಸ್ವಾಮಿಗೆ ಜಯವಾಗಲಿ, ಓಂ ಭಲೋ ಶಂಕರ ಭಲೋ ಎಂದು ಕೂಗಿದರು. ನೆರೆದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ವೀರಭದ್ರೇಶ್ವರ ದೇವರ ದರ್ಶನ ಪಡೆದರು.

ವೀರಭದ್ರಪ್ಪ ಪಾಟೀಲ್ ಮಹೇಶ ಅಗಡಿ, ಓಂಪ್ರಕಾಶ ಅಗಡಿ, ಅಶೋಕ ಸೊಂಡೆ, ಸಚೀನ್ ಕಲ್ಲೂರ ಉಮೇಶ್ ಕಲ್ಲೂರ್. ಅರುಣ್ ಕಲ್ಲೂರು. ಸೇರಿದಂತೆ ಅನೇಕರಿದ್ದರು.