ಸಡಗರದಿಂದ ಜರುಗಿದ ಶ್ರೀ ಕರಿಬಸವೇಶ್ವರ ಪಲ್ಲಕ್ಕಿ ಉತ್ಸವ

ಹುಮನಾಬಾದ್: ಮೇ.13:ತಾಲೂಕಿನ ಹುಡುಗಿ ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ರವಿವಾರ ಸಾಯಂಕಾಲ ಪೂಜ್ಯ ವಿರುಪಾಕ್ಷ ಶಿವಾಚಾರ್ಯರು ದಿವ್ಯ ಸಾನಿಧ್ಯದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಜಾ ಭಜಂತ್ರಿ ವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು ದಾರಿ ಉದ್ದಕ್ಕೂ ಪರಂಪರೆಯಂತೆ ಭಕ್ತಾದಿಗಳು ಶಾಲು ಹೊದಿಸಿ. ದೇವರ ದರ್ಶನ ಪಡೆದು. ತಮ್ಮ ಹರಕೆ ತೀರಿಸಿದರು ಬಿಜೆಪಿ ಎಸ್ ಟಿ ಮೋರ್ಚಾ ತಾಲೂಕ ಅಧ್ಯಕ್ಷ ದಯಾನಂದ್ ಮೇತ್ರಿ ಧರ್ಮಪತ್ನಿ ಶ್ರೀದೇವಿ ಮೇತ್ರಿ, ಭಾರತಿ ಮೇತ್ರಿ, ಈಶ್ವರ್ ಮೇತ್ರಿ, ಅರುಣ್ ಕುಮಾರ್ ಮೇತ್ರಿ, ಉಷಾ ಮೇತಿ, ರಂಜಿತ ಮೇತ್ರಿ, ಕಾವೇರಿ ಭಂಡಾರಿ, ಹರ್ಷಿತ, ದಿವ್ಯ, ಸಾಯಿ, ವೀರ, ಆಯುಷ್, ದೀಕ್ಷಾ, ಗಗನ್, ಪಲ್ಲಕ್ಕಿ ಉತ್ಸವದ ದರ್ಶನ ಪಡೆದರು. ಪಲ್ಲಕ್ಕಿ ಉತ್ಸವದ ಸೇವೆಯನ್ನು ಮಾದೇವಯ್ಯ ಸ್ವಾಮಿ, ಬಸ್ಸು ಮುಗಳಿ, ಶರಣು ಸಿಂಧನಕೇ, ದಯಾನಂದ್, ಚನ್ನಬಸವ ಮಲ್‍ಶೆಟ್ಟಿ, ಚಿನ್ನಪ್ಪ ಮುಗಳಿ, ರೇವಣಸಿದ್ದ ಸಾತ, ಬಸಯ್ಯಸ್ವಾಮಿ, ಶಿವಲಿಂಗ ಸ್ವಾಮಿ, ಶಿವಶಂಕರ್ ಸ್ವಾಮಿ, ಶಿವನಂದ್ ಉಳ್ಳಾಗಡ್ಡಿ, ಅನಿಲ್ ಕಣಶೆಟ್ಟಿ, ಮಾಂತೇಶ್ ನಂದಿ, ಅನಿಲ್ ನಂದಿ, ವಿನಾಯಕ್ ಭೀಮಶೆಟ್ಟಿ, ಶ್ರವಣ್ ಭೀಮಶೆಟ್ಟಿ, ಚನ್ನಬಸಪ್ಪ ಭೀಮಶೆಟ್ಟಿ, ಚೈತನ್ ಉಡುಬಮನಳ್ಳಿ, ಸುಭಾಷ್ ಕಣಶೆಟ್ಟಿ, ಪವನ್ ಮುಗಳಿ ಇವರುಗಳು ಪಲ್ಲಕ್ಕಿ ಉತ್ಸವದಲ್ಲಿ ತಮ್ಮ ಭಕ್ತಿ ಸೇವೆ ಮಾಡಿದರು. ಅತಿ ವೈಭವದೊಂದಿಗೆ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಯಶಸ್ವಿಯಾಗಿ ಜರುಗಿತ್ತು.