ಸಡಗರದಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ

ಹುಮನಾಬಾದ:ಜ.18: ಗಡವಂತಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ರಥೋತ್ಸವ ನೆರವೇರಿತು.

ಬೆಳಗ್ಗೆ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಗ್ನಿ ತುಳಿಯಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ದೇವರಿಗೆ ಶಾಲು ಹೊದಿಸಿ ನಮಿಸಿದರು. ಸಂಜೆ 6 ಗಂಟೆಗೆ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ರಥೋತ್ಸವ ಜರುಗಿತು. ಭಕ್ತರು ರಥಕ್ಕೆ ಖಾರೀಕು, ಬೆಂಡು-ಬತ್ತಾಸು, ಲಿಂಬೆಹಣ್ಣು ಬಾಳೆಹಣ್ಣು ಹಾರಿಸಿ ಭಕ್ತಿ ಸಮರ್ಪಿಸಿದರು.

ಜಾತ್ರೆ ನಿಮಿತ್ತ ವಿಶೇಷ ಆರೋಗ್ಯ ಶಿಬಿರ ನಡೆಯಿತು.
ಎನ್ ಬಿಎನ್ ಫೌಂಡೇಶನ್ ಕಲಬುರಗಿ ಆಶ್ರಯದಲ್ಲಿ ಹತ್ತಾರು ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಪಂಚ ಕಮಿಟಿ ಅಧ್ಯಕ್ಷ ಬಸವಂತರಾವ್ ವಿಭೂತಿ, ಈಶ್ವರ ಕಲಬುರ್ಗಿ, ಪ್ರೇಮಕುಮಾರ ಹೇಮಣಿ, ಶಶಿಕಾಂತ ಗಂಗಸಿರಿ, ಶಿವರಾಜ ವಿಭೂತಿ, ಬಾಬುರಾವ ನೂಲಾ, ಓಂಕಾರ ತುಂಬಾ, ಈರಪ್ಪಣ ಜನ್ಮಾ ಜಗನ್ನಾಥ ಭಾವಿ, ಶಿವಾನಂದ ನೂಲಾ, ಬಸವರಾಜ ಪೆÇಲೀಸ್ ಪಾಟೀಲ, ಬಸವರಾಜ ಮೊಳಕೇರಿ, ಬಸವಣ್ಣಪ್ಪ ಜಮಾದರ, ವಿಜಯಶಂಕರ ವಿಭೂತಿ, ಮಲ್ಲಪ್ಪ ಕಿಟ್ಟಾ ಸಂಜುಕುಮಾರ ಪಸರಿ, ಅನೀಲಕುಮಾರ ಪಾಟೀಲ, ಗುರುಲಿಂಗಪ್ಪ ಗಂಗ, ವೀರಯ್ಯಾ ಮಠಪತಿ, ಕರೆಪ್ಪ ಹೆಮ್ಮಣಿ, ಜಿತೇಂದ್ರ ತುಂಬಾ, ಗುರುಲಿಂಗಪ್ಪ ಭಾವಿ, ಬಸವಣ್ಣಪ್ಪ ಹಿರೇಮಠ, ವಿನೋದ ನೀಲಮ್ಮನೋ ಇತರರಿದ್ದರು.