ಸಟಪಟನಹಳ್ಳಿ ಸಮೀಪದಲ್ಲಿ ಅಪಾಯಕಾರಿ ತೆಗ್ಗು ಗುಂಡಿ ಮುಚ್ಚುವಂತೆ ಸಾರ್ವಜನಿಕರ ಆಗ್ರಹ

ಸೇಡಂ, ಜು,23: ತಾಲೂಕಿನಿಂದಾ ಚಿಂಚೋಳಿ ತಾಲೂಕಿಗೆ ಹೋಗುವ ರಸ್ತೆ ಮಧ್ಯದಲ್ಲಿರುವ ಸಟಪಟನಹಳ್ಳಿ ಸಮೀಪದ ರಾಧಾ ಕಿಶನ್ ಫಾರ್ಮ್ ಹೌಸ್ (ಶೇಟ್ ಜೀತೋಟದ) ಸಮೀಪ ಒಂದು ಬ್ರಿಡ್ಜ್ ನ ಮೇನ್ ರೋಡ್ ನಲ್ಲಿ ಎರಡು ತೆಗ್ಗು ಗುಂಡಿಗಳು ಬಿದ್ದಿದ್ದು ಅನೇಕ ಪ್ರಯಾಣಿಕರು ಬಿದ್ದು ಗಾಯಾಳುಗಳು ಮಾಡಿಕೊಂಡಿದ್ದಾರೆ ಆದಷ್ಟು ಮಟ್ಟಿಗೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮುಚ್ಚಿಸಿ ಸಾರ್ವಜನಿಕರ ಜೀವ ಉಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಲೂಕಿನ ಸಟಪಟನಹಳ್ಳಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೃಹದಾಕಾರವಾಗಿ ತಗ್ಗು ಬಿದ್ದಿದ್ದು,ಅದನ್ನು ವೀಕ್ಷಿಸಿ.ಅಧಿಕಾರಿಗಳ ನಡೆಯನ್ನು ತೀವ್ರ ಖಂಡಿಸಿದ್ದೇನೆ. ಜನರ ಜೀವದ ಜೊತೆ ಚಲ್ಲಾಟವಾಡುವ ಹಕ್ಕು ಯಾರಿಗೂ ಇಲ್ಲ. ಪ್ರಾಣ ಹೋಗುವ ಮಟ್ಟಿಗೆ ತಗ್ಗುಗಳು ನಿರ್ಮಾಣವಾಗಿವೆ .

ಬಾಲರಾಜ್ ಗುತ್ತೇದಾರ್

ವಿಧಾನಸಭೆ ಜೆಡಿಎಸ್ ಅಭ್ಯರ್ಥಿ ಸೇಡಂ

ಸೇಡಂನಿಂದಾ ಚಿಂಚೋಳಿ ತಾಲೂಕಿಗೆ ಹೊಗುವ ಮಧ್ಯದಲ್ಲಿ ಸ್ವಿಮಿಂಗ್ ಫೂಲ್ ನಿಂತೆ ದೊಡ್ಡ ಪ್ರಮಾಣದ ತೆಗ್ಗು ಗುಂಡಿ ಬಿದ್ದಿದ್ದು ಮೊದಲ ಬಾರಿಗೆ ಅಧಿಕಾರಿಗಳು ಗಮನ ಕ್ಕೆ ಆದರೆ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ.

ಶೇಖರ್ ನಾಟಿಕರ್ ಸಮಾಜ

ಪ್ರಜಾ ಕಾರ್ಮಿಕ ಸೇಡಂ

ಇದು ತುಂಬಾ ಅಪಾಯಕಾರಿ ಆಗಿದೆ ನಾನು ನಿನ್ನೆ ಸ್ವಲ್ಪದರಲ್ಲಿ ಬಚಾವ್ ಆದೆ.

ಘಾಳಪ್ಪ ಕುಂಬಾರ
ಶಿಕ್ಷಕರು ಸೇಡಂ