ಸಜ್ಜಿಗೆ ಮಾಡುವ ವಿಧಾನ

ಸತ್ಯ ನಾರಾಯಣ ಸ್ವಾಮಿ ಪೂಜೆಯಲ್ಲಿ ಮಾಡಲೇಬೇಕಾದ ನೈವೇದ್ಯ.
ಮಾಡುವ ವಿಧಾನ:-
1 ಲೋಟ ಚಿರೋಟಿ ರವೆಯನ್ನು 2 ಚಮಚ ತುಪ್ಪ ಹಾಕಿ ಹುರಿದಿಟ್ಟುಕೊಳ್ಳಿ.
ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸ್ವಲ್ಪ ಕುಂಕುಮ ಕೇಸರಿ ಹಾಕಿ 2 ಲೋಟ ನೀರು ಹಾಕಿ ಕುದಿಯಲು ಇಡಿ.
1 ಲೋಟ ಸಕ್ಕರೆ ಹಾಕಿ ಕರಗಿಸಿ ಹುರಿದ ಚಿರೋಟಿ ರವೆ ಹಾಕಿ ಕಲೆಸಿ ಸಣ್ಣ ಉರಿಯಲ್ಲಿ ತಟ್ಟೆ ಮುಚ್ಚಿ ಬೇಯಿಸಿ ಕೊನೆಯಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಚಿಟಿಕೆ ಏಲಕ್ಕಿ ಪುಡಿ, 1 ಸಣ್ಣದಾಗಿ ಹೆಚ್ಚಿದ ಬಾಳೆ ಹಣ್ಣನ್ನು ಹಾಕಿ ಕಲೆಸಿದರೆ ಸಜ್ಜಿಗೆ ಸಿದ್ಧ. ಕುಂಕುಮ ಕೇಸರಿ ಮತ್ತು ಬಾಳೆ ಹಣ್ಣು ನಿಮಗೆ ಬೇಕಾದರೆ ಹಾಕಿ ಮಾಡಿ.