ಸಜ್ಜಲಶ್ರೀ ಶಾಖಾಮಠದಲ್ಲಿ ಅಯ್ಯಾಚಾರ ಕಾರ್ಯಕ್ರಮ

ಸಿರವಾರ,ಮೇ.೨೮-
ಪಟ್ಟಣದ ಸಜ್ಜಲಶ್ರೀ ಶರಣಮ್ಮ ತಾಯಿಯವರ ಶಾಖಾಮಠದಲ್ಲಿ ಭಾನುವಾರ ೫೦ನೇ ಸುವರ್ಣ ಶಿವಾನುಭವಗೋಷ್ಠಿಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆದವು.
ಬೆಳಿಗ್ಗೆಯಿಂದ ನೀಲಗಲ್ ಬೃಹನ್ಮಠದ ಷ.ಬ್ರ. ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ, ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಕಾರ್ಯಕ್ರಮ, ಗುರುಕುಲ ಪೂಜಾ ಮಂದಿರದ ಉದ್ಘಾಟನೆ ನಡೆಯಿತು.
ಶ್ರೀ ಷ.ಬ್ರ ಅಭಿನವ ಸೋಮನಾಥ ಶಿವಾಚಾರ್ಯರು ನವಲಕಲ್, ಶ್ರೀ ಷ.ಬ್ರ. ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಕಲ್ಮಠ ಮಾನ್ವಿ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಕಲ್ಮಠ ಕವಿತಾಳ, ಪೂಜ್ಯ ಶ್ರೀ ಶಂಭುಲಿಂಗ ಶಿವಯೋಗಿಗಳು ಕಲ್ಲೂರು, ಪೂಜ್ಯ ನೀಲಕಂಠಾರ್ಯ ತಾತನವರು ಗುಡದೂರು, ಪೂಜ್ಯ ದೊಡ್ಡ ಬಸವಾರ್ಯರು ಸಜ್ಜಲಗುಡ್ಡ ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು.
ಹಿರಿಯರಾದ ಚುಕ್ಕಿ ಸೂಗಪ್ಪ ಸಾಹುಕಾರ, ಜಿ.ಚಂದ್ರಶೇಖರಪ್ಪ, ಅಮರೇಗೌಡ ಮಿಯ್ಯಾಪೂರ, ಟಿ.ಆರ್ ಪಾಟೀಲ್, ಎಂ.ರುದ್ರಗೌಡ, ಜೆ.ಚಂದ್ರಶೇಖರಪ್ಪ ಗೌಡ, ಅಯ್ಯನಗೌಡ ಏರಡ್ಡಿ, ಜಿ.ವೀರೇಶ, ವೈ ಭೂಪನಗೌಡ, ಈಶಪ್ಪ ಹೂಗಾರ್, ಜಿ.ಸೂಗೂರೇಶ, ಮಲ್ಲಿಕಾರ್ಜುನ ಹೂಗಾರ್, ಬಸವರಾಜ ಹೂಗಾರ್, ಶರಣಪ್ಪ ಹುಯಿಲಗೋಳ, ರಾಮಲಿಂಗಯ್ಯ ಕಲ್ಯಾಣ, ನಿರುಪಾದಿ ಸ್ವಾಮಿ ಕಲ್ಯಾಣ, ಬಸವರಾಜ ಹಿರೇಮಠ ನಾಗಡದಿನ್ನಿ, ಚನ್ನಬಸ್ಸಯ್ಯ ಶಾಖಾಪೂರ ಸೇರಿದಂತೆ ಇತರರು ಇದ್ದರು.