ಸಜ್ಜನರು ಮೌನಿಗಳಾದರೆ ದುರ್ಜನರು ಮೆರೆಯುತ್ತಾರೆ:ಟಿ ಹೆಚ್ ಎಂ



(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ. 13: ಸಜ್ಜನರು ಮೌನಿಗಳಾದರೆ ದುರ್ಜನರು ಮೆರೆಯುತ್ತಾರೆ ಸಂಗೀತ ಜನರ ಬದುಕನ್ನೇ ಬದಲಾಯಿಸುತ್ತದೆ ಸಂಗೀತದಿಂದ ನಮ್ಮ ದೇಹದಲ್ಲಿನ ಎಷ್ಟೋ ಸ್ನಾಯುಗಳು ಕ್ರಿಯಾಶೀಲವಾಗುತ್ತದೆ ಎಂದು ನಿನ್ನೆ  ಸಂಜೆ ನಗರದ ಸಾಂಸ್ಕೃತಿಕ ಸಮುಚ್ಚಯ ಹೊಂಗಿರಣ ಸಭಾಭವನದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್ ಹಮ್ಮಿಕೊಂಡಿರುವ ಬೇಸಿಗೆ  ಉದ್ಘಾಟಿಸಿ ಮಾತನಾಡಿದರು.
 ಸಂಗೀತ ಒಂದು ತಪಸ್ಸು ನಿರಂತರ ಸಾಧನೆಯಿಂದ ಇದು ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ ರಾಗಗಳಿಂದ ರೋಗಗಳನ್ನು ಗುಣಪಡಿಸಬಹುದು ಬತ್ತಿ ಹೋದ ಆಸರೆಯ ಕೆರೆಗೆ ಬಲೆ ಬೀಸಿ ಸೋಸಿ ಬಸಿಯುತ್ತಾರೆ ರೆಕ್ಕೆಗಳಿದ್ದು ಹಾರಲಾಗದು ಮೀನುಗಳು ಆದರೆ ಎಷ್ಟೋ ಮಕ್ಕಳಿಗೆ ತಮ್ಮ ಕರ್ತೃತ್ವ ಶಕ್ತಿಯಿಂದ ಸಂಗೀತ ಹೇಳಿ ರೆಕ್ಕೆ ಕಟ್ಟಿ ಹಾರಲು ಬಿಡುತ್ತಾರೆ ನಮ್ಮ ದೊಡ್ಡ ಬಸವ ಗವಾಯಿಗಳು ಎಂದು ಹೇಳಿದರು ಕಳೆದ ಒಂದು ತಿಂಗಳಿಂದ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಮಾಡಿ ಸಂಗೀತ ತರಬೇತಿ ಕೊಟ್ಟು ಇಂದು ಅವರಿಗೆ ಪ್ರಶಸ್ತಿ ಪತ್ರಗಳನ್ನು ಕೊಡುತ್ತಿರುವುದನ್ನು ನೋಡಿದರೆ ಅವರನ್ನು ಶ್ಲಾಘಿಸಬೇಕು ಶ್ರೀ ಗುರು ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು
ಮಹಾಬಲೇಶಪ್ಪ ಕೃಷಿ ಇಲಾಖೆ ನಿವೃತ್ತಿ ಅಧಿಕಾರಿ ಅಧ್ಯಕ್ಷತೆ ವಹಿಸಿಧದರು.  ಟಿ. ಕೊಟ್ರಪ್ಪ ನಿವೃತ್ತ ಉಪ ನಿರ್ದೇಶಕರು ಸಂಸ್ಕೃತಿ ಇಲಾಖೆ ಇವರು ಉಪಸ್ಥಿತರಿದ್ದರು ಮುಖ್ಯ ಅತಿಥಿಗಳಾಗಿ ಎಲ್ಲನಗೌಡ ಶಂಕರ ಬಂಡೆ ಹೊನ್ನೂರ್ ಸ್ವಾಮಿ ಮಂಜುನಾಥ ಗೋವಿಂದವಾಡ ತಿಮ್ಮ ರೆಡ್ಡಿ ಭಾಗವಹಿಸಿದ್ದರು ಜಡೇಸ್ ಕಾರ್ಯಕ್ರಮ ನಿರೂಪಿಸಿದರು ದೊಡ್ಡ ಬಸವ ಗವಾಯಿ ಸ್ವಾಗತಿಸಿದರು ಕೆ ಕವಿತಾ ವಂದಿಸಿದರು ಕಾರ್ಯಕ್ರಮದಲ್ಲಿ ಉಮೇಶ್ ಯೋಗೇಶ್ವರಿ  ಸರಸ್ವತಿ ಗೌರಿ ಮನ್ವಿತ ಕೋಮಲ ಇಂದ್ರ ಪ್ರಿಯಾಮಣಿ ಅನನ್ಯ ಮೇಘನಾ ಅನೇಕ ಮಕ್ಕಳಿಂದ ಗೀತೆಗಳ ಕಾರ್ಯಕ್ರಮ ನಡೆಯಿತು

One attachment • Scanned by Gmail