‘ಸಜನಾ’ ಕುರಿತು ಒಂದು ದಿನದ ವಿಚಾರ ಸಂಕಿರಣ

ಕಲಬುರಗಿ,ಜು.20:ವಿಶ್ವ ವಿಖ್ಯಾತ ರೋಗ ನಿದಾನ (ಪೆಥಾಲಾಜಿಸ್ಟ್) ತಜ್ಞ ಡಾ. ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ -‘ಸಜನಾ’ ಅವರ ಬದುಕು, ಬರಹ ಮತ್ತು ಸಂಶೋಧನೆ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಜುಲೈ – 22, ಶುಕ್ರವಾರದಂದು ಮಧ್ಯಾಹ್ನ 1.30ಕ್ಕೆ ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
‘ಸಜನಾ – 82 ಸ್ಮರಣೋತ್ಸವ’ ಅಂಗವಾಗಿ ಆಯೋಜಿಸಿರುವ ಈ ವಿಚಾರ ಸಂಕಿರಣವನ್ನು ಖ್ಯಾತ ಚರ್ಮರೋಗ ತಜ್ಞ ಡಾ.ಪಿ.ಎಮ್. ಬಿರಾದಾರ ಅವರು ಉದ್ಘಾಟಿಸುವರು. ಪ್ರಾಚಾರ್ಯ ಡಾ.ಆರ್. ಬಿ. ಕೊಂಡಾ ಅವರು ಅಧ್ಯಕ್ಷತೆ ವಹಿಸುವರು.
ಮೊದಲ ಗೋಷ್ಠಿಯಲ್ಲಿ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಅವರು ‘ಸಜನಾ ಬದುಕು’ ಕುರಿತು ಮತ್ತು ಡಾ. ಮೀನಾಕ್ಷಿ ಬಾಳಿ ಅವರು ಸಜನಾ ಆತ್ಮ ವೃತ್ತಾಂತ ” ಬಿಚ್ಚಿದ ಜೋಳಿಗೆ ಮತ್ತು… ” ಕುರಿತು ಮಾತನಾಡುವರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಮಹಿಳಾ ಸ್ವಾಸ್ಥ್ಯ ತಜ್ಞೆ ಡಾ.ಅನ್ನಪೂರ್ಣ ಹೊಗಾಡೆ ಅವರು ವಹಿಸುವರು.
ಎರಡನೇ ಗೋಷ್ಠಿಯು ಕಲಬುರಗಿ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್. ಎಸ್. ಗುಬ್ಬಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು; ಖ್ಯಾತ ವಾಗ್ಮಿ ಡಾ.ನಾ.ಸೋಮೇಶ್ವರ ಅವರು “ಸಜನಾ ಬರಹ ಮತ್ತು ಸಂಶೋಧನೆ” ಕುರಿತು ಮಾತನಾಡುವರು.
ಬೆಳಗಾವಿಯ ಡಾ.ಎಸ್. ಜೆ. ನಾಗಲೋಟಿಮಠ ಇಂಟನ್ರ್ಯಾಷನಲ್ ಫೌಂಡೇಶನ್, ಕಲಬುರಗಿಯ ಷಡಕ್ಷರಿಸ್ವಾಮಿ ದಿಗ್ಗಾಂವಕರ ಟ್ರಸ್ಟ್, ವಿ.ಜಿ. ಮಹಿಳಾ ಮಹಾವಿದ್ಯಾಲಯ ಮತ್ತು ಸಖಿ ಓದಿನ ಬಳಗದ ಸಹಯೋಗದಲ್ಲಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಸಂಯೋಜಕ ಎಸ್ ಎಸ್ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.