ಸಚ್ಛರಿತ್ರೆ ಪಾರಾಯಣ ಸಂಪನ್ನ


ಮುನವಳ್ಳಿ,ಜು.16: ಪಟ್ಟಣದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಸಾಯಿ ಮಂದಿರ ಸೇವಾ ಸಮಿತಿ ವತಿಯಿಂದ ಜು 7 ರಿಂದ ಪ್ರತಿದಿನ ಬೆಳಗ್ಗೆ ಹಮ್ಮಿಕೊಂಡಿದ್ದ ಶ್ರೀ ಸಾಯಿಬಾಬಾ ಸಚ್ಛರಿತ್ರೆ ಪಾರಾಯಣ ಸಂಪನ್ನಗೊಂಡಿತು.
ಶ್ರೀ ಸಾಯಿ ಸದ್ಭಕ್ತರು ಪ್ರತಿದಿನ ಪಾರಾಯಣದ ಜೊತೆಗೆ ಅಷ್ಟೋತ್ತರ ನಾಮಾವಳಿ ಆರತಿ ಭಜನೆ ಜರುಗಿತು. ಸತ್ಯನಾರಾಯಣ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮ ಮಂಗಳಗೊಂಡಿತು.
ವಿಜಯ ಅಮಠೆ, ಶ್ರೀಶೈಲ ಹಿರೇಮಠ, ಪ್ರಕಾಶ ಯಕ್ಕುಂಡಿ ಬಾಳು ಹೊಸಮನಿ, ಈರಣ್ಣ ಮುದಗಲ, ಎ.ಕೆ ಪಾಟೀಲ ದಂಪತಿಗಳು ಹಾಗೂ ಸಾಯಿ ಸೇವಾ ಸಮಿತಿಯ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.