ಸಚ್ಚಿದಾನಂದ ಮಹಾಸ್ವಾಮಿಗಳ 25ನೇ ಪುಣ್ಯಾರಾಧನೆ

ಬೀದರ ನ 9: ಬೆಳ್ಳೂರ ಗ್ರಾಮದಲ್ಲಿ ಸದ್ಗುರು ಸಿದ್ಧಾರೂಢ ಮಹಾಸ್ವಾಮಿಗಳ ಮೂರ್ತಿಪ್ರತಿಷ್ಠಾಪನೆ 15ನೇ ವಾರ್ಷಿಕೋತ್ಸವ ಹಾಗೂಸದ್ಗುರು ಸಚ್ಚಿದಾನಂದ ಮಹಾಸ್ವಾಮಿಗಳವರ25ನೇ ಪುಣ್ಯಾರಾಧನೆ ರಜತ ಮಹೋತ್ಸವ
ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಚಳಂಬಿಯ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಸದ್ಗುರು ಪ್ರಮಾನಂದ ಮಹಾಸ್ವಾಮಿಗಳು,ಶ್ರವಣ ಭಕ್ತಿಯ ಮತ್ತು ಮಾತೆಯರ ಕುರಿತು ಹೇಳುತ್ತಾ, ಮಹಿಳೆಯರು ಮಾತನಾಡುವುದು, ಮನೆ ನಡೆಸುವುದು ಮಕ್ಕಳಪಾಲನೆ ಪೋಷಣೆ ಮಾಡುವುದು, ಜ್ಞಾನವನ್ನು ಸವಿಯುವುದು. ಜ್ಞಾನವೆಂಬ, ವೃಕ್ಷಕ್ಕೆ ಶ್ರವಣ ಬೀಜ ಎಂದು ಹೇಳಿ ಕಿವಿಯೆಂಬ ನಾಲಿಗೆಯ ಮೂಲಕಸವಿಯುವುದೇ ಶ್ರಾವಣ ಭಕ್ತಿ.ಗುರುವಿನ ಗುಲಾಮನಾಗುವ ತನಕದೊರೆಯದಣ್ಣ, ಮುಕುತಿ, ಮಾನವ ಜನ್ಮದೊಡ್ಡದು ಇದು ಹಾನಿ ಮಾಡಲು ಬೇಡ ಹುಚ್ಚಪ್ಪಗಳಿರಾ.ಮನುಷ್ಯ ಸಾಮಾಜಿಕ ಜೀವಿ ಸಾಧು, ಶರಣ ನಂತರ ಮಸ್ತಕದಮೇಲೆ ಹಸ್ತವಿದ್ದಾಗ ಮನುಷ್ಯನಿಗೆ ಜ್ಞಾನೋದಯವಾಯಿತು ಎಂದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು,ಮಹಿಳೆಯರು, ಯುವಕರು ಪಾಲ್ಗೊಂಡರು.