ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳವರ ಸ್ವರ್ಣ ಕಿರೀಟೋತ್ಸವ

ದಾವಣಗೆರೆ.ಏ.೨೭; ದೈವಜ್ಞ ಬ್ರಾಹ್ಮಣ ಸಮಾಜಸಂಘದ ವತಿಯಿಂದನಗರದ ಶ್ರೀ ರೇಣುಕ ಮಂದಿರದಲ್ಲಿ  ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಜೀಯವರ ಸ್ವರ್ಣ ಕಿರೀಟೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಇಂದು ಬೆಳಗ್ಗೆ 8-00 ಗಂಟೆಯಿಂದ ಮಾತೆಯರಿಂದ ಕುಂಕುಮಾರ್ಚನೆ ನಂತರ  ಪುರುಷರಿಂದ ಪುಷ್ಪಾರ್ಚನೆ. ವೇದಘೋಷಗಳೊಂದಿಗೆ ಪರಮಪೂಜ್ಯ ಶ್ರೀಗಳು ಆಗಮಿಸಿದರು ಬಳಿಕ ಸಮಾಜದವತಿಯಿಂದ ಗುರುಗಳಿಗೆ ಪಾದುಕಾ ಪೂಜೆ  ಶ್ರೀಗಳವರ ಕಿರೀಟೋತ್ಸವ ರಾಜೋಪಚಾರ ಪೂಜೆ, ಗುರುಸ್ತೋತ್ರ ಪಠಣ, ಫಲಮಂತಕತೆ ನಂತರ ಮಹಾಪ್ರಸಾದ ಜರುಗಿತು.ಇಂದು. ಸಂಜೆ 4-00 ಯಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದೈವಜ್ಞ ಬ್ರಾಹ್ಮಣ ಸಮಾಜದ ಸಾಧಕರಿಗೆ ಗೌರವದೊಂದಿಗೆ ಸನ್ಮಾನ ನಡೆಯಲಿದೆ ಎಂದರು. ಈ ವೇಳೆ‌ ಸಂಘದ ಪ್ರಶಾಂತ್ ವಿಶ್ವನಾಥ್ ವರ್ಣೇಕರ್,ಪದಾಧಿಕಾರಿಗಳಾದ ಸತೀಶ್ ಶ್ರೀಕಾಂತ್ ಸಾನು, ರಾಜೀವ್ ವಿ. ವೆರ್ಣೇಕರ್, ಸಾಯಿಪ್ರಕಾಶ್ , ಡಿ.ಎಸ್. ಸುಬ್ಬರಾವ್, ರಾಘವೇಂದ್ರ, ಸಚಿನ್ ಎಸ್. ವೆರ್ಣೇಕರ್ ಉಪಸ್ಥಿತರಿದ್ದರು.