ಸಚ್ಚಾರಿತ್ರ್ಯದ ವ್ಯಕ್ತಿಗೆ ಮತ ನೀಡಿ: ಕೇಶವ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30: ಇಲ್ಲಿನ  17ನೇ ವಾರ್ಡಿನ ಹನುಮಾನ್ ನಗರ, ವಿಶಾಲ್ ನಗರ,  20 ನೇ ವಾರ್ಡಿನ ಹುಸೇನ್ ನಗರ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೊರ್ಲಗುಂದಿ ಕೇಶವ ರೆಡ್ಡಿ ಅವರು ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಅವರೊಂದಿಗೆ ಪುತ್ರಿಯರಾದ
ಮಂಜುಳ‌ ಮನೋಹರ ರೆಡ್ಡಿ, ಶ್ರಾವಣಿ ಪ್ರದೀಪ್ ರೆಡ್ಡಿ, ಬಾಲಾಜಿ, ಲಿಂಗಾರೆಡ್ಡಿ, ಬೀರಪ್ಪ ವಿರುಪಾಪುರ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಮತದಾರರಿಗೆ ಕರಪತ್ರ ನೀಡಿ. ನಗರದಲ್ಲಿ ಸ್ಪರ್ಧಿಸಿರುವವರಲ್ಲಿ ಸಚ್ಚಾರಿತ್ರ್ಯದವರನ್ನು ಆಯ್ಕೆ ಮಾಡಿ, ನಾನು ಯಾವುದೇ ಅಕ್ರಮದಿಂದ ಹಣ ಮಾಡಿಲ್ಲ, ಹಣದಿಂದ ಜನ ಸೇವೆ ಮಾಡಬೇಕೆಂದು ಬಂದಿಲ್ಲ. ಅರವಿಂದ ಕ್ರೇಜಿವಾಲ್ ಅವರ ಆಡಳಿತವನ್ನು ಮೆಚ್ಚಿ, ಈ ಪಕ್ಷದಿಂದ ಜನ ಸೇವೆ ಮಾಡಲು  ಬಂದಿರುವೆ. ನಿಮ್ಮ ಮತ ನೀಡಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.