ಸಚಿವ ಹಾಲಪ್ಪ ಆಚಾರ್ ಕಮಿಷನ್ ಪಡೆಯುವವರಲ್ಲ: ಸಾಕ್ಷಿ ಇದ್ದರೆ ನೀಡಿ: ಮುತ್ತಣ್ಣ


ಸಂಜೆವಾಣಿ ವಾರ್ತೆ
ಕುಕನೂರು, ಸೆ.11: ಯಲಬುರ್ಗ ಕ್ಷೇತ್ರದ ಶಾಸಕ ಹಾಗೂ ಸಚಿವ ಹಾಲಪ್ಪ ಆಚಾರ್ ಅವರು ಯಾರಿಂದಲೂ ಕಮಿಷನ್ ಪಡೆಯುವ ಗಿರಾಕಿಯಲ್ಲ
ತಾಕತ್ತಿದ್ದರೆ ವೀಡಿಯೋ ವೈರಲ್ ಮಾಡಿ ಎಂದು ಎಸ್ಸಿ ಎಸ್ಟಿ ಗುತ್ತಿಗೆದಾರರ ಸಂಘದ ಮುತ್ತಣ್ಣ ಬಾರಿನಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ. ಅವರು ತಾಲ್ಲೂಕಿನಲ್ಲಿ ಸಚಿವ ಹಾಲಪ್ಪ ಆಚಾರ್ ರವರು ೪೦%  ಕಮಿಷನ್ ಪಡೆಯುವುದಾಗಿ ಆರೋಪ ಮಾಡಿರುವುದು ಶುದ್ಧ ಸುಳ್ಳು ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳು ಮತ್ತು ವೀಡಿಯೊಗಳು ತಕ್ಷಣವೇ ತಮ್ಮಲ್ಲಿದ್ದರೆ ತಾಕತ್ತಿದ್ದರೆ ವೈರಲ್ ಮಾಡಿ ಅದನ್ನು ಬಿಟ್ಟು ಅಭಿವೃದ್ಧಿಯ ಹರಿಕಾರರಾದ ಸಚಿವ ಹಾಲಪ್ಪ ಆಚಾರ್ ರವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಹೀಗೆ ಮುಂದೆವರೆದರೆ ಎಲ್ಲ ಗುತ್ತಿಗೆದಾರರು ಹನುಮೇಶ ಕಡೇಮನಿ ಅವರ ವಿರುದ್ಧ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು  ಮುಂದುವರೆದು ಮಾತನಾಡುತ್ತಾ ಹನುಮೇಶ್ ಕಡೇಮನಿಯವರು ಈಗಾಗಲೇ ತಾಲ್ಲೂಕಿನಲ್ಲಿ ಸಚಿವರ     ಅಧಿಕಾರವಧಿಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ತಾವು ಕೂಡ ಮಾಡುತ್ತಿದ್ದಾರೆ. ಆದರೆ ಅವುಗಳನ್ನೆಲ್ಲ ಮಾಡಿ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಹಾಲಪ್ಪ ಆಚಾರ್ ರವರು  ಯಾವುದೇ ಹಣ ಪಡೆಯುವ  ಮತ್ತು ಯಾರಿಗೂ ಹಣ ಕೊಡೋರು ಅವರು ಅಲ್ಲ.   ಇಂತಹ ವ್ಯಕ್ತಿಯ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸುವುದು ಸರಿಯಾದದುದಲ್ಲ ಈ ಸಂದರ್ಭದಲ್ಲಿ ಗುತ್ತಿಗೆದಾರ ಯಮನೂರಪ್ಪ ನಡುಲಮನಿ ಮಾತನಾಡಿ, ಹಲೋ ಸಿಕವಾಗಿ ಯೋಗ ಎಬ್ಬಿಸಿರುವುದು ಶುದ್ಧ ಸುಳ್ಳು ಗುತ್ತಿಗೆದಾರ ದೇವಪ್ಪ ಅರಕೆರೆ ಅವರ ಮಾಡಿದ ಆರೋಪಕ್ಕೆ ನಾವು ಈ ರೀತಿ ಉತ್ತರ ಕೊಡಬೇಕಾಗಿದೆ ಎಂದು ತಿಳಿಸಿದರು.  ಮಲ್ಲಿಕಾರ್ಜುನ, ಶಂಕರ ಭಾವಿಮನಿ ,ಘಾಳೇಶ ವೀರಾಪುರ,ಮರಿಸ್ವಾಮಿ ಪೂಜಾರ್ , ಶಿವು ಗದ್ದಿ , ಮೈಲಾರಪ್ಪ ತೊಂಡಿಹಾಳ , ನೀಲಪ್ಪ ಬೆಣಕಲ್, ಹನುಮಂತಪ್ಪ ರೆ ್ಯಾವಣಿಕಿ ,ಲಕ್ಷ್ಮಣ ಕಾಳಿ ,ಜಗದೀಶ್ ಸೂಡಿ , ಹಾಗೂ ಇತರರು ಇದ್ದರು

Attachments area