ಸಚಿವ ಸುಧಾಕರ್ ವಿರುದ್ದ
ಶಾಸಕ ಸೋಮಶೇಖರ ರೆಡ್ಡಿ ಗರಂ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.17: ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ದ ಸ್ವಪಕ್ಷೀಯರಾದ  ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ವಾಗ್ದಾಳಿ ನಡೆಸಿದ್ದಲ್ಲದೆ. ವಿಮ್ಸ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಲ್ಲಿ ಲಾಭಿ ನಡೆದಿದೆ ಎಂದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು.   ರಾಜ್ಯದಲ್ಲಿ ಅಧಿಕಾರಿಗಳ ನೇಮಕಾತಿಯ ಲಾಭಿಯನ್ನು   ಶಾಸಕ ಸೋಮಶೇಖರ್ ರೆಡ್ಡಿ ಪರೋಕ್ಷವಾಗಿ ಬಿಚ್ಚಿಟ್ಟಂತೆ.
ವಿಮ್ಸ್ ನಿರ್ದೇಶಕರ ನೇಮಕಾತಿಯಲ್ಲಿ ಲಾಭಿ ನಡೆದಿದೆ ಎಂಬಂತೆ.
ವಿಮ್ಸ್ ನಲ್ಲಿ ನಡೆದ ಸಾವು ಪ್ರಜರಣದ  ಘಟನೆಯಲ್ಲಿ ನಿರ್ದೇಶಕರ ವೈಫಲ್ಯವಿದೆ ಎಂದ ರೆಡ್ಡಿ, ಯಾರೋ‌ ( ಸುಧಾಕರ)  ಬಂದು ಇವರನ್ನು ಡೈರೆಕ್ಟರ್ ಮಾಡಿದ್ದಾರೆ. ನಾವು, ಗಂಗಾಧರ ಗೌಡ ಅವರ ನೇಮಕ ಮಾಡುವುದು ಬೇಡ ಎಂದಿದ್ದೆವು. ಆದರೆ ಸಚಿವ ಸುಧಾಕರ್ ಅವರು ಗಂಗಾಧರ್ ಗೌಡ ಅವರನ್ನು ಹಠಕ್ಕೆ ಬಿದ್ದವರಂತೆ ನೇಮಕ ಮಾಡಿದ್ದಾರೆ. ನೇಮಕಾತಿಯಲ್ಲಿ ಪಾರದರ್ಶಕವಾಗಿ ಆಗಿಲ್ಲವೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅವರಿಗಿಂತ ಚೆನ್ನಾಗಿ ಕೆಲಸ ಮಾಡುವವರು ಇದ್ದಾರೆ.
ಆದ್ರೆ ಇವರನ್ನೇ ನೇಮಕಾತಿ ಮಾಡಿದ್ದಾರೆ.  ಈಗಲೂ ಗಂಗಾಧರಗೌಡ ಅವರ ಕಾರ್ಯವೈಖರಿ ನಮಗೆ ತೃಪ್ತಿ ಇಲ್ಲ ಎಂದರು.