ಸಚಿವ ಸುಧಾಕರ್ ರಾಜೀನಾಮೆಗೆ ಮಹಿಳಾ ಕೈ ಶಾಸಕರ ಆಗ್ರಹ


ಬೆಂಗಳೂರು,ಮಾ.೨೫- ರಾಜ್ಯ ದಲ್ಲಿರುವುದು ಲಂಚ ,ಮಂಚದ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಹಿಳಾ ಶಾಸಕಿಯರು , ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಶಾಸಕ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಕುಸುಮಾ ಶಿವಳ್ಳಿ, ರೂಪಾ ಶಶಿಧರ್, ಸೌಮ್ಯ ರೆಡ್ಡಿ, ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಸೇರಿದಂತೆ ಮಹಿಳಾ ನಾಯಕಿಯರು ಸಚಿವ ಸುಧಾಕರ್ ರಾಜೀನಾಮೆ ನೀಡುವ ತನಕ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಮಾತನಾಡಿ,ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿ ಕೊಟ್ಟಿದೆ.ಹಾಗಾಗಿ ಇಂದು ನಾವು ರಾಜಕೀಯದಲ್ಲಿ ಇದ್ದೇವೆ. ಜವಾಬ್ದಾರಿ ಸ್ಥಾನದಲ್ಲಿ ಇರುವ ಸಚಿವ ಸುಧಾಕರ್ ಹೇಳಿಕೆ ಮಹಿಳೆಯರನ್ನ ಅನುಮಾನದಿಂದ ನೋಡುವಂತಹ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ
೨೨೫ ಶಾಸಕರ ತನಿಖೆಯಾಗಲಿ ಎಂದು ನೀಡಿರುವ ಹೇಳಿಕೆ ಸಚಿವರಾಗಲು ಅಲ್ಲಾ ಶಾಸಕರಾಗಲೂ ಸುಧಾಕರ್ ಅನರ್ಹರು ಕೂಡಲೇ ತಮ್ಮ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವಾ. ಕುಂಬಳಕಾಯಿ ಕಳ್ಳ ಅಂದ ತಕ್ಷಣ ಹೆಗಲು ಮುಟ್ಟಿ ನೋಡಿಕೊಂಡವರಂತೆ ಯಾಕೆ ವರ್ತಿಸುತ್ತೀರಾ ಕೋರ್ಟ್ ಗೆ ಹೋಗಿ ತಡೆ ತಂದಿದ್ದಾರೆ ಇದರಿಂದ ಮಾಡಿರುವ ತಪ್ಪು ಒಪ್ಪಿಕೊಂಡಂತಾಗಿದೆ.ಜೊತೆಗಡ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದಿದ್ದಾರೆ.
ಈಗಿನ ಸರ್ಕಾರ ಲಂಚಕ್ಕೆ, ಮಂಚಕ್ಕೆ ಹೆಸರಾಗಿದೆ. ಇಂತಹವರಿಂದಲೇ ನಮಗೆ ನಾಚಿಕೆಯಾಗುತ್ತದೆ ಸ್ಪೀಕರ್ ಏನು ಮಾಡುತ್ತಿದ್ದಾರೆ ಎಂದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಸುಧಾಕರ್ ಆರೋಗ್ಯ ಸಚಿವರಲ್ಲ, ಅನಾರೋಗ್ಯ ಮಂತ್ರಿ ಬಾಯಿ ತೆಗೆದರೆ ರಾಮನ ಜಪ ಮಾಡುವ ಪಕ್ಷದಲ್ಲಿ ಯಾಕೆ ಈ ರೀತಿಯ ಹೇಳಿಕೆ ಬಂದಿದೆ.ಬಿಜೆಪಿಯ ಶೋಭಾ ಕರಂದ್ಲಾಜೆ, ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಹಲವರು ಇದ್ದಾರೆ ಎಲ್ಲರಿಗೆ ಅವಮಾನ ಮಾಡಿದಂತಾಗಿದೆ ಎಂದರು.
ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಸುಧಾಕರ್ ಹೇಳಿಕೆಯನ್ನ ಇ- ಮೇಲ್ ಮಾಡ್ತೇವೆ ಸಂಶಯ ದೃಷ್ಟಿಯಲ್ಲಿ ನೋಡುವಂತೆ ಹೇಳಿಕೆ ನೀಡಿದ್ದಾರೆ ಎಂದರು
ಶಾಸಕಿ ರೂಪಾ ಶಶಿಧರ್ ಮಾತನಾಡಿ ಮಹಿಳೆಯರ ಆಶೀರ್ವಾದ ಪಡೆದುಕೊಂಡು ಬಂದಿದ್ರೆ ಹೀಗೆ ಮಾತನ್ನಾಡ್ತಿರಲಿಲ್ಲ.ಮಾಡಬಾರದ ಕೆಲಸ ಮಾಡಿದವರಿಗೆಲ್ಲ ಸಚಿವ ಸ್ಥಾನ ಕೊಟ್ಟಿದ್ದಾರೆ. ಈ ಹಿಂದೆ ಯಾರೂ ಹೀಗೆ ಮಾಡಿರಲಿಲ್ಲ.ಮುಂದೆ ಹೀಗೆ ಯಾರೂ ಮಾಡಬಾರದು ಎಂದರು.
ಸುಧಾಕರ್ ಸ್ಥಾನಕ್ಕೆ ಸಮರ್ಥರಿದ್ದಾರಾ ಎಂಬ ಅನುಮಾನ ಮೂಡಿದೆ ಸಂಸ್ಕಾರ ಇಲ್ಲದೆ ಇರೋ ಕಾರಣಕ್ಕೆ ಹೀಗೆ ಮಾತನ್ನಾಡಿದ್ದಾರೆನಿಮ್ಮಲ್ಲಿ ಲೋಪದೋಷ, ಸಂಶಯ ಇಟ್ಕೊಂಡು ಇನ್ನೊಬ್ಬರ ಮೇಲೆ ಆರೋಪ ಮಾಡೋದು ಯಾಕೆ ?
ಶಾಸಕಿ ಸೌಮ್ಯ ರಾಮಲಿಂಗಾ ರೆಡ್ಡಿ ಮಾತನಾಡಿ ಸುಧಾಕರ್ ಮಾತು ಕೇಳಿ ನಗೋದಾ ಅಳೋದಾ ಗೊತ್ತಾಗ್ತಿಲ್ಲನನಗೆ ಬಜೆಟ್ ಬಗ್ಗೆ ಪ್ರಶ್ನೆ ಕೇಳಬಹುದು ಅಂದ್ಕೊಂಡಿದ್ದೆ ಅದೆಲ್ಲಾ ಸುಳ್ಳಾಯಿತು ಎಂದರು.