ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ವಿಚಾರ

ದಾವಣಗೆರೆ.ನ.೧೬: ಎಂಟಿಬಿ ಹಾಗೂ ವಿಶ್ವನಾಥ ಅವರಿಗೆ ಸಚಿವ ಸ್ಥಾನ ನೀಡ ಬೇಕು ಎಂಬ ಬಗ್ಗೆ ಚರ್ಚೆಯೇ ಆಗಿಲ್ಲ.
ಇದಕ್ಕಾಗಿ ನಾವು ಪ್ರತ್ಯೇಕ ವಾಗಿ ಸಿಎಂಗೆ ಭೇಟಿ ಆಗುವ ಅಗತ್ಯವೂ ಇಲ್ಲ ಎಂದು
ದಾವಣಗೆರೆ ಯಲ್ಲಿ ಸಹಕಾರ ಸಚಿವ ಎಸ್ ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಮುಖ್ಯ ಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ಇನ್ನೂ ಮುಂದೆ ಸಹ ಅದೇ ರೀತಿ ನಡೆಯುತ್ತಾರೆ.
ಯಾರಿಗೆ ಸಚಿವ ಸ್ಥಾನ ನೀಡಬೇಕು ಅದು ಸಿಎಂ ಅವರಿಗೆ ಬಿಟ್ಟ ವಿಚಾರ.

ಚುನಾವಣೆ ಗೆ ಹಿಂದೇಟು ಹಾಕಿಲ್ಲ
ಗ್ರಾಮ ಪಂಚಾಯಿತ್ ಚುನಾವಣೆಗೆ ಬಿಜೆಪಿ ಹಿಂದೇಟು ಹಾಕಿಲ್ಲ. ಹಾಕುವುದು ಇಲ್ಲಾ. ಕೋವಿಡ್ ಹಿನ್ನೆಲೆ ಸ್ವಲ್ಪ ಮುಂದಕ್ಕೆ ಹಾಕುವು ಸೂಕ್ತ ಎನ್ನಲಾಗಿತ್ತು. ಆದ್ರೆ ಕಾಂಗ್ರೆಸ್ ಕೋರ್ಟಗೆ ಹೋಗಿತ್ತು. ಮೂರು ವಾರ ಕಾಲಾವಕಾಶ ನೀಡಲಾಗಿದೆ. ಬಿಜೆಪಿ ಚನಾವಣೆ ಸಿದ್ಧವಿದೆ.
ಕಾಂಗ್ರೆಸ್ ನವರಿಗೆ ಸತ್ಯ ಹೇಳಿ ಗೊತ್ತಲ್ಲ‌. ಬರೀ ಸುಳ್ಳು ಹಬ್ಬಿಸುವುದು ಆ ಪಕ್ಷದ ಉದ್ದೇಶ ಎಂದು ಸೋಮಶೇಖರ ವಾಗ್ದಾಳಿ ನಡೆಸಿದ್ದಾರೆ