ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಆಪ್ತರಿಗೆ ಐಟಿ ಶಾಕ್

ಬಳ್ಳಾರಿ: ಸಚಿವ ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು ಅವರು ಬೇನಾಮಿ ಹೆಸರಿನಲ್ಲಿ ರುವ ಕಾರ್ಖಾನೆಗಳನ್ನು ನಿರ್ವಹಿಸುತ್ತಿರುವ ಆಪ್ತರ ಮನೆ ಕಚೇರಿ ಮೇಲೆ ಇಂದು ಐಟಿ
ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಪಾಲುದಾರಿಕೆಯ ಕಂಪನಿಗಳ ಮೇಲೆ ಬೆಂಗಳೂರು, ಚೆನ್ನೈನ ಹದಿನೈದು ಅಧಿಕಾರಿಗಳಿಂದ‌ ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿ ದಾಳಿ ಮಾಡಲಾಗಿದೆ.‌

ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 310 ಮತ್ತು 510ಪ್ಲಾಟ್ ನಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಐಟಿ ಅಧಿಕಾರಿಗಳ ಕೈಗೆ ಮಹತ್ವದ ದಾಖಲೆ ದೊರೆತಿವೆಯಂತೆ.

ಸಚಿವ ಶ್ರೀರಾಮುಲು ಹಾಗೂ ಕೈಲಾಸ್ ವ್ಯಾಸ್ ಸೇರಿ ಹರಿ ಇಸ್ಪಾತ್ ಫ್ಯಾಕ್ಟರಿ ಖರೀದಿ ಮಾಡಿದ್ದಾರೆ. ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಖರೀದಿಯ ಹಣದ ಮೂಲದ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಮಾಜಿ ಶಾಸಕ ಸುರೇಶ್ ಬಾಬುಗೆ ಸೇರಿದ ಕೊಪ್ಪಳದ ಸಿಮ್ಲಾ ಡಾಬ ಬಳಿಯ ವಾಷಿಂಗ್ ಪ್ಲಾಂಟ್ , ಬಳ್ಳಾರಿಯ ವೆಂಕಟೇಶ್ವರ,
ಶ್ರೀಹರಿ ಮತ್ತು ಪಿಜಿಎಂ ಪ್ಲಾಂಟ್ ಗೆ ಸೇರಿದ ದಾಖಲೆ ಪರಿಶೀಲನೆ ನಡೆದಿದೆ.

ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಲಾಡ್ ಕುಟುಂಬದ ಪ್ಲಾಂಟ್ ಗಳನ್ನು ಲೀಜ್ ಮೇಲೆ ಕೈಲಾಸ್ ವ್ಯಾಸ್ ನಡೆಸುತ್ತಿದ್ದರು. ಈ ಕೈಗಾರಿಕೆಗಳು ತೆರಿಗೆ ವಂಚನೆ ಮಾಡಿದ ಆರೋಪದ ಹಿನ್ನಲೆ ದಾಳಿ ಮಾಡಿದೆ ಎನ್ನಲಾಗಿದೆ.

ನಮ್ಮದು ಯಾವುದೇ ಕಾರ್ಖಾನೆಗಳು:
ಐಟಿ ದಾಳಿ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು. ಸಾಕಷ್ಟು ಕಡೆಗಳಲ್ಲಿ ಐಟಿ ದಾಳಿ ನಡೆಯುವುದು ಸಾಮಾನ್ಯ. ಯಾವತ್ತೇ ಐಟಿ ದಾಳಿ ನಡೆದಾಗಲೂ ಈ ಪ್ರಶ್ನೆ ಕೇಳ್ತಾರೆ. ಕಾನೂನು ಅದರದ್ದೇ ಪ್ರಕಾರ ಕೆಲಸ ಮಾಡುತ್ತೆ. ಯಾರೇ ಏನೇ ಮಾತನಾಡಿದ್ರು ಕಾನೂನು ಪ್ರಕಾರ ಪ್ರಕ್ರಿಯೆ ನಡೆಯುತ್ತೆ. ಐಟಿ ದಾಳಿ ಬಗ್ಗೆ ನಾನು ಏನೂ ಮಾತನಾಡಲು ಹೋಗಲ್ಲ. ನಮ್ಮದು ಯಾವುದೇ ಕಾರ್ಖಾನೆಗಳು ಇಲ್ಲ. ಯಾರ ಜೊತೆಯೂ ಪಾಲುದಾರಿಕೆಯಲ್ಲಿ ಪ್ಯಾಕ್ಟರಿ ಇಲ್ಲ. ಹಿಂದೆಯೂ ಪಾಲುದಾರಿಕೆ ವ್ಯವಹಾರ ನಡೆಸಿಲ್ಲ. ಈಗಲೂ ಇಲ್ಲ. ನನ್ನ ಹತ್ತಿರ ಯಾವುದು ಇಲ್ಲ. ಗಣಿಗಾರಿಕೆ ನಡೆಯುವ ವೇಳೆಯೇ ನನ್ನ ಹತ್ತಿರ ಯಾವುದು ಕೈಗಾರಿಕೆ ಇರಲಿಲ್ಲ. ಈಗ ಇನ್ನೇನು ಮಾಡಲಿ ಎಂದಿದ್ದಾರೆ.