ಸಚಿವ ಶ್ರೀರಾಮುಲು ಪರ ಸಂಜಯ್ ಬಿರುಸಿನ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04: ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,  ಸಚಿವ  ಬಿ.ಶ್ರೀರಾಮುಲು ಅವರ ಪರವಾಗಿ ಇಂದು ಪಕ್ಷದ ರಾಜ್ಯ ಕಾರ್ಯ ಕಾರಿಣಿ ಸಮಿತಿ ಸದಸ್ಯ ಎ.ಎಂ.ಸಂಜಯ್ ಅವರು ಕೌಲ್ ಬಜಾರ್ ಪ್ರದೇಶದಲ್ಲಿ ಮನೆ ಮನೆಗಳಿಗೆ ತೆರಳಿ ಬಿರುಸಿನ ಪ್ರಚಾರ ಮಾಡಿದರು.
ಪಕ್ಷದ ಸಂಘಟನೆ ಮತ್ರು ಅಭಿವೃದ್ಧಿ ದೃಷ್ಟಿಯಿಂದ ಶ್ರೀರಾಮುಲು ಅವರ ಕೊಡುಗೆ ಅಪಾರವಾದುದು. ಅವರು ಯಾವುದೇ ಸಮಾಜದ ಬೇದ ಬಾವ ಇಲ್ಲದೆ ಎಲ್ಲರೊಂದಿಗೆ ಸ್ನೇಹ ಜೀವಿಯಾಗಿ ಬದುಕುವಂತಹವರು. ಇಂತಹವರ ನಾಯಕತ್ವ ಅವಶ್ಯಕತೆಗಾಗಿ ಜನತೆ ರಾಮುಲು ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕು.
ಅಷ್ಟೇ ಅಲ್ಲದೆ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಪ್ರಧಾನಿ ಮೋದಿ ಅವರು ಆಡಳಿತ ದೇಶದ ಸುಭದ್ರತೆ, ಸಂರಕ್ಷಣೆ ಆಧ್ಯತೆ ನೀಡಿದೆ. ಅವರ ಆಡಳಿತದಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಾಗಿರುವುದನ್ನು ಕಂಡು ಜನತೆ ಕಾಂಗ್ರೆಸ್ ನ ಸುಳ್ಳು ಗ್ಯಾರೆಂಟಿಗಳಿಗೆ ಮಾರು ಹೋಗದೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. 
ಸಂಜಯ್ ಅವರೊಂದಿಗೆ ಬಾಬು, ರವಿ. ಕಾಂತ್ರಿ, ಸೀನಾ ಮುಂತಾದವರು ಪ್ರಚಾರದಲ್ಲಿ ತೊಡಗಿದ್ದರು.