ಸಚಿವ ಶ್ರೀರಾಮುಲು ಗ್ರಾಮೀಣಕ್ಕೆ ಫಿಕ್ಸ್ ಪ್ರಚಾರ ಕಾರ್ಯ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.2: ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನೂರಕ್ಕೆ ನೂರರಷ್ಟು ಫಿಕ್ಸ್ ಆಗಿದ್ದು. ಅವರು ತಮಗೆ ಮತ ನೀಡುವಂತೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಕಳೆದ ಬಾರಿಯ ಅಭ್ಯರ್ಥಿ ಸಹೋದರ ಸಣ್ಣ ಪಕ್ಕೀರಪ್ಪ‌ಅವರ ಜೊತೆಗೂಡಿ ಇಂದು ಕ್ಷೇತ್ರದ ಆಲದಳ್ಳಿ ಮತ್ತು ಬಂಡಿಹಟ್ಟಿ, ರಾಮನಗರದಲ್ಲಿ ಭರ್ಜರಿ  ಪ್ರಚಾರ ಮಾಡಿದರು.
 ಸ್ವತಃ ಶ್ರೀರಾಮುಲು‌ ಅವರು ಇನ್ನೂ ನಾನು ಎಲ್ಲಿ ನಿಲ್ಲಬೇಕು ಎಂದು ಒಕ್ಷ ನಿರ್ಧರಿಸಲಿದೆ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದರೂ, ಅವರು ಈಗಾಗಲೇ ಇದೇ ಕ್ಷೇತ್ರಕ್ಕೆ ಫಿಕ್ಸ್ ಆಗಿದ್ದಾರೆ. ಪಕ್ಷ ಕಳೆದುಕೊಂಡಿರುವ ಕ್ಷೇತ್ರವನ್ನು ಮರಳಿ ತರಬೇಕೆಂಬ ಹಂಬಲ ಅವರದ್ದು ಮತ್ತು ಪಕ್ಷದ್ದಾಗಿದೆಯಂತೆ.
ನಾಗೇಂದ್ರ ಅವರಿಗೆ ಸರಿಯಾದ ಪೈಪೋಟಿ ನೀಡಬೇಕೆಂದರೆ ಅದು ಶ್ರೀರಾಮುಲು ಅವರಿಂದ ಮಾತ್ರ ಸಾಧ್ಯ ಎಂದು ಅವರನ್ನು ಇಲ್ಲಿ ಕಣಕ್ಕಿಳಿಸಲು ಪಕ್ಷವೇ ನಿರ್ಧರಿಸಿದೆಯಂತೆ.
ಹಾಗಾಗಿ ಕ್ಷೇತ್ರದ ಒಂದು‌ಕಡೆ ಭಾಗದಿಂದ ಮತಯಾಚನೆಗೆ ಶ್ರೀರಾಮುಲು ಅವರು ತಮ್ಮ ಬೆಂಬಲಿಗರೊಂದಿಗೆ ಆರಂಭಿಸಿದ್ದಾರಂತೆ.