ಸಚಿವ ಶ್ರೀರಾಮುಲು ಅಲೆಮಾರಿಯೇ ವೆಂಕಟೇಶ್ ಹೆಗಡೆ ಪ್ರಶ್ನೆ

ಬಳ್ಳಾರಿ, ಡಿ.25: ಮಾಜಿ ಮುಖ್ಯ‌ಂಮತ್ರಿ‌ ಸಿದ್ದರಾಮಯ್ಯ ಅವರನ್ನು ಪ್ರವಾಸಿಗ ಎಂದು ಕರೆದಿರುವ ಸಚಿವ ಶ್ರೀರಾಮುಲು ಅವರೇನೋ ಅಲೆಮಾರಿ ರಾಜಕಾರಣಿಯೇ ಎಂದು ಕೆಪಿಸಿಸಿ ಮಾಧ್ಯಮ ಪ್ಯಾನಲಿಷ್ಟ್ ವೆಂಕಟೇಶ್ ಹೆಗಡೆ ಪ್ರಶ್ನಿಸಿದ್ದಾರೆ
ಈ ‌ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ಸಿದ್ದರಾಮಯ್ಯ ಅವರು ಕಳೆದ ಚುನಾವಣೆ ವೇಳೆ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಆಶಯದಂತೆ ಸ್ಪರ್ಧಿಸಿದ್ದರು. ಕೆಲವು ಕಾರಣಗಳಿಂದ ಚಾಮುಂಡೇಶ್ವರಿಯಲ್ಲಿ ಅವರು ಸೋಲು ಕಂಡರು. ಅವರು ಬಾದಾಮಿಗೆ ಬಂದು ಸ್ಪರ್ಧಿಸಿದ್ದು, ಅಲ್ಲೇ ಶ್ರೀರಾಮುಲು ಅವರು ಸೋತಿದ್ದು ಈಗ ಇತಿಹಾಸ.
ಈಗ ಸಚಿವ ರಾಮುಲು ಅವರು ವಿನಾ ಕಾರಣ ಸಿದ್ದರಾಮಯ್ಯ ಅವರನ್ನು ಪ್ರವಾಸಿಗ ಎಂದು ಟೀಕಿಸುವುದು ಸರಿ ಅಲ್ಲ.
ಈ ಹಿಂದೆ ರಾಮುಲು ಅವರು ಬಳ್ಳಾರಿ ಗ್ರಾಮಾಂತರ ಕ್ಷೇತ್ರದೊಂದ ಸ್ಪರ್ಧಿಸಿದ್ದರು. ಆಮೇಲೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದರು. ಅಲ್ಲಿ ಗೆದ್ದ ಮೇಲೆ ಮತ್ತೆ ರಾಜೀನಾಮೆ ನೀಡಿದ್ದರು. ಹಾಲಿ ಸಚಿವರಾಗಿರುವ ಅವರು ಬಳ್ಳಾರಿಯಿಂದ ಅಲ್ಲ ಬದಲಿಗೆ ನೆರೆಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ. ಅಷ್ಟೇ ಅಲ್ಲ ಅವರೂ ಸಹ ಕಳೆದ ಚುನಾವಣೆಯಲ್ಲಿ ಕೇವಲ ಮೊಳಕಾಲ್ಮೂರು ಕ್ಷೇತ್ರ ಮಾತ್ರ ಅಲ್ಲ ಇದರ ಜೊತೆಗೆ ಬಾದಾಮಿ ಕ್ಷೇತ್ರದಿಂದ ಸಹ ಸ್ಪರ್ಧೆ ಮಾಡಿದ್ದರು.
ಅಂತಹ ರಾಮುಲು ಅವರು ಇದೀಗ ಸಿದ್ದರಾಮಯ್ಯ ಅವರ ರಾಜಕಾರಣ ಟೀಕೆ ಮಾಡುವುದು ಸರಿ ಅಲ್ಲ. ಅದೂ ಅಲ್ಲದೆ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕುವ ಅವಶ್ಯಕತೆ ಇಲ್ಲ. ಅವರು ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲೇ ನಿಂತರೂ ಸುಲಭವಾಗಿ ಗೆಲ್ಲುವ ಜನಪ್ರಿಯತೆ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅವರು ಸೋತದ್ದು ಜೆಡಿಎಸ್, ಬಿಜೆಪಿ ಕುತಂತ್ರದಿಂದ ಎಂಬುದು ಖುದ್ದು ರಾಮುಲು ಅವರಿಗೆ ತಿಳಿದಿದೆ ಎಂದಿದ್ದಾರೆ.