ಸಚಿವ ಶ್ರೀರಾಮುಲುರವರಿಂದ ವಿದ್ಯಾರ್ಥಿಗಳಿಗೆ
ಸ್ಟೀಲ್ ವಾಟರ್ ಬಾಟಲ್ ವಿತರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.21: ಸಚಿವ ಶ್ರೀರಾಮುಲು ಸಚಿವರು ಅವರು ನಗರದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲ್ ಗಳನ್ನು ಕೊಡುಗೆಯಾಗುವುದಾಗಿ ಸಮಾರಂಭವೊಂದರಲ್ಲಿ ಭರವಶೆ ನೀಡಿದ್ದರು.
ಅದರಂತೆ ಇಂದು ಮಾಜಿ ಸಂಸದೆ ಜೆ.ಶಾಂತಾ ನೇತೃತ್ವದಲ್ಲಿ
ಮುಖಂಡರಾದ ಓಬಳೇಶ್, ಜಿ. ವೀರಶೇಖರ್ ರೆಡ್ಡಿ, ಕೆ ಎಸ್  ಎಸ್ ಅಶೋಕ್,  ಇಬ್ರಾಹಿಂ ಬಾಬು,  ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ರಾಜು ಮೊದಲಾದವರು
ನಗರದ ಬಾಲಕಿಯರ  ಹೈ ಸ್ಕೂಲ್,  ಸರಳ ದೇವಿ ಕಾಲೇಜ್ ಮತ್ತು ಮಹಮ್ಮದೀಯ  ಹೈಸ್ಕೂಲ್ ತೆರಳಿ ಸ್ಟೀಲ್ ವಾಟರ್ ಬಾಟಲ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು. 
ಕೊಟ್ಟ ಮಾತಿನಂತೆ  ನಡೆದುಕೊಳ್ಳುವುದು  ಮನುಷ್ಯತ್ವ. ನಮ್ಮ ಪಕ್ಷದ ನಿಲುವು ಕೂಡ ಇದೇ ಆಗಿದೆ. ಜನರ ಮುಂದೆ ಏನು ಭರವಸೆ ಕೊಟ್ಟಿರುತ್ತೇವೋ ಅದನ್ನು ಈಡೇರಿಸಬೇಕೆಂದು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿ
 ಯಾವಾಗಲೂ ಹೇಳುತ್ತಲೇ ಇರುತ್ತಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ  ನಡೆಯುತ್ತೇವೆ ಎಂದರು.