ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೈತರ ಪ್ರತಿಭಟನೆ: ಭಾವಚಿತ್ರ ಹರಿದು ಆಕ್ರೋಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.26:- ರೈತರು ಸಾಲಮನ್ನಾ ಆಗಲಿ, ಬರಗಾಲ ಬರಲಿ ಎಂದು ಬಯಸುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿರುದ್ಧ ಕಬ್ಬು ಬೆಳೆಗಾರರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ಚಾಮರಾಜನಗರದ ಜಿಲ್ಲಾಡಳಿತ ಭವನದ ಎದುರು ಕಬ್ಬು ಬೆಳೆಗಾರರ ಸಂಘದಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುತ್ತೇವೆಂದು ರಾಹುಲ್ ಗಾಂಧಿ ಚುನಾವಣಾ ಭಾಷಣಗಳಲ್ಲಿ ಹೇಳಿದ್ದಾರೆ. ಸಚಿವ ಶಿವಾನಂದ ಪಾಟೀಲ್ ಅವರು ಸಾಲಮನ್ನಾದ ಬಗ್ಗೆ ರೈತರಕುರಿತು ಹಗುರವಾಗಿ ಹೇಳಿಕೆ ಕೊಡುತ್ತಿದ್ದು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಚಿವ ಪಾಟೀಲ್ ಭಾವಚಿತ್ರವನ್ನು ದಹಿಸಲು ಮುಂದಾದ ವೇಳೆ ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ, ಪಟ್ಟು ಬಿಡದರೈತರು ಭಾವಚಿತ್ರವನ್ನು ಹರಿದು ಆಕ್ರೋಶ ಹೊರಹಾಕಿದರು.
ಏಕವಚನದಲ್ಲಿ ವಾಗ್ದಾಳಿ:
ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ದೇಶಾದ್ಯಂತ ನಿನ್ನೆ ವಿಶ್ವರೈತ ದಿನಾಚರಣೆಯನ್ನು ಆಚರಿಸಿ ರೈತದೇಶದ ಬೆನ್ನೆಲುಬು ಹಾಗೂ ದೇಶಕ್ಕೆಅನ್ನ ನೀಡುವ ಅನ್ನದಾತ ಎಂದು ಮಾತನಾಡುತ್ತಾರೆ. ಅದೇ ರಾಜ್ಯ ಸರ್ಕಾರದ ಮಂತ್ರಿಯಾದ ಶಿವಾನಂದ ಪಾಟೀಲ್ ರೈತರು ಬರಗಾಲವನ್ನು ಬರಬೇಕೆಂದು ಆಶಿಸುತ್ತಾರೆ,ಕಾರಣ ಸಾಲ ಮನ್ನಾವನ್ನು ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಾರೆ ಆದ್ದರಿಂದ ಒತ್ತಾಯಿಸುತ್ತಾರೆ ಎಂದು ಬಾಯಿಗೆ ಬಂದರೀತಿಯಲ್ಲಿ ಅವಿವೇಕತನದಿಂದ ಮಾತನಾಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಮಂತ್ರಿಗಳು ಘೋಷಣೆ ಮಾಡಿದಾಗ ಅವಿವೇಕಿ ಶಿವಾನಂದ ಪಾಟೀಲ್ ಎಲ್ಲಿ ಹೋಗಿದ್ದ, ತಾಕತ್ತಿದ್ದರೆ ಅಲ್ಲಿಎದ್ದು ನಿಂತು ಪ್ರತಿಭಟಿಸಿ ಬರಗಾಲವನ್ನು ರಾಜ್ಯ ಸರ್ಕಾರ ಘೋಷಣೆ ಮಾಡುವಾಗ ಸುಸ್ತಿ ಸಾಲದ ಮೇಲಿನ ಬಡ್ಡಿಯನ್ನು ಮುಖ್ಯಮಂತ್ರಿಗಳು ಮನ್ನಾ ಮಾಡುವ ಘೋಷಣೆ ನೀಡಿದಾಗನೀವೇನೂ ಸತ್ತು ಹೋಗಿದ್ರಾ, ಆಗ ಮಾತನಾಡಬೇಕಿತ್ತು, ರೈತರ ಸಾಲಮನ್ನಾ ಮಾಡಲಾಗಲ್ಲ ಎಂದು ಹೇಳಬೇಕಿತ್ತು ಆಗ ಏನು ನಿಮ್ಮನ್ನುಗಿ ರವಿ ಇಡಲಾಗಿತ್ತಾ ಎಂದು ಕೇಳಿದರುಎಂದು ಸಚಿವರ ವಿರುದ್ಧ ಏಕವಚನದಲ್ಲಿಯೇ ವಾಗ್ಧಾಳಿ ನಡೆಸಿದರು.
ರೈತರ ಆತ್ಮಹತ್ಯೆ ಬಗ್ಗೆ ಈ ಹಿಂದೆ ಮಾತನಾಡಿದ್ದಾಗ ಬುದ್ಧಿ ಕಳುಹಿಸಿದ್ದೆವು, ಈಗ ಮತ್ತೇ ಬಾಲ ಬಿಚ್ಚಿದ್ದಾರೆ, ಶಿವಾನಂದ ಪಾಟೀಲ್ ಅವರ ಬಾಲವನ್ನು ಕತ್ತರಿಸುತ್ತೇವೆ ಎಂದು ಕಿಡಿಕಾರಿದರು.
ಸಚಿವ ಶಿವಾನಂದ ಪಾಟೀಲರನ್ನು ಸಾರ್ವಜನಿಕವಾಗಿಓಡಾಡಲು ಬಿಡುವುದಿಲ್ಲ, ಚಾಮರಾಜನಗರಕ್ಕೆ ಬಂದರೆ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆಕೊಟ್ಟರು.
ಪ್ರತಿಭಟನೆಯಲ್ಲಿ ತಾಲೂಕುಅಧ್ಯಕ್ಷ ಹಾಲಿನ ನಾಗರಾಜು ಮಲೆಯೂರು ಹರ್ಷ ಎಳನೀರು ಮಹೇಂದ್ರ ಸತೀಶ್ ಗ್ರಾಮ ಘಟಕದ ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಪ್ರಭುಸ್ವಾಮಿ ಊಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಮಹದೇವಸ್ವಾಮಿ, ಚೇರ್ಮನ್ ಗುರು, ನಾಗೇಂದ್ರ ಕಿಳಲಿಪುರ ನಂದೀಶ್, ಶ್ರೀಕಂಠ ನಾಗರಾಜು ಮಹದೇವಪ್ಪ ಸಿದ್ದಪ್ಪ ಮುಂತಾದವರು ಹಾಜರಿದ್ದರು.