ಸಚಿವ ಶಿವಾನಂದ ಪಾಟೀಲರು ಬಹಿರಂಗ ಕ್ಷಮೆಯಾಚಿಸಲಿ:ಕೂಚಬಾಳ

ತಾಳಿಕೋಟೆ : ಡಿ.28: ರಾಜ್ಯದಲ್ಲಿ ಮಳೆ ಇಲ್ಲದೇ ಆವರಿಸಿ ಬಂದಿರುವ ಬರಗಾಲದಿಂದ ಅನ್ನದಾತ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ ಹಿರಿಯ ರಾಜಕೀಯ ನಾಯಕರು ಸಚೀವರಾದ ಶಿವಾನಂದ ಪಾಟೀಲ ಅವರು ರೈತರ ಬಗ್ಗೆ ಕೀಳಾಗಿ ವರ್ತಿಸಿರುವದು ಅವರ ಘನತೆಗೆ ಶೋಭೆ ತರುವಂತದಲ್ಲಾ ಕೂಡಲೇ ಸಚೀವರು ಭಹಿರಂಗವಾಗಿ ರೈತರಿಗೆ ಕ್ಷಮೆಯಾಚಿಸಬೇಕೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
ಬುಧವಾರರಂದು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಸಚೀವ ಶಿವಾನಂದ ಪಾಟೀಲ ಅವರು ಮೂಲತಃ ಕೃಷಿಕ ಕುಟುಂಭದಿಂದಲೇ ಬಂದವರು ರೈತರಿಗೆ ಸಂಬಂದಿಸಿದ ಬಹುದೊಡ್ಡ ಸಂಸ್ಥೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ 25 ವರ್ಷಗಳಿಂದ ಕೆಲಸ ನಿರ್ವಹಿಸಿದವರಾಗಿದ್ದಾರೆ ಪಿಕೆಪಿಎಸ್ ಮೂಲಕ ರೈತರಿಗೆ ಸಾಲ ಸೂಲದಿಂದ ಹಿಡಿದು ರೈತರ ಬಗ್ಗೆ ಸಾಕಷ್ಟು ಅರೀತುಕೊಂಡವರು ಅಂತವರು ರೈತರಿಗೆ ನೀರು ಫ್ರೀ ಇದೆ, ಕರೆಂಟ್ ಫ್ರೀ ಇದೆ ಮತ್ತು ರೈತರಿಗೆ ಎಲ್ಲ ಸಬ್ಸೀಡಿ ಸಿಗುತ್ತಿವೆ ಮೇಲೆ ಮೇಲೆ ಬರಗಾಲ ಬರಲಿ ಎಂದು ಅಪೇಕ್ಷೆ ಪಡುತ್ತಾರೆ ಇದರಿಂದ ಸಾಲ ಮನ್ನಾ ಆಗುತ್ತದೆ ಹೇಳಿಕೆ ನೀಡಿರುವದು ಅವರ ಘನತೆಗೆ ಶೋಭೆ ತರುವಂತದಲ್ಲಾವೆಂದರು. ಸಚೀವ ಶಿವಾನಂದ ಪಾಟೀಲರು ಕಳೆದ 25 ವರ್ಷಗಳಿಂದ ರೈತರ ಬಗ್ಗೆ ತಿಳಿದಿರುವ ಅನುಭವ ಮತ್ತೊಬ್ಬರಿಗೆ ಇರಲಿಕ್ಕಿಲ್ಲಾ ಮೇಲಾಗಿ ಸದ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಚೀವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಇಷ್ಟೇಲ್ಲಾ ಅನುಭವ ಇದ್ದು ಕೂಡಾ ರೈತರ ಬಗ್ಗೆ ಕೀಳಾಗಿ ವರ್ತಿಸಿರುವದು ಏಷ್ಟು ಸರಿ ಎಂದು ಪ್ರಶ್ನೀಸಿದ ಅವರು ರೈತರು ಬರಗಾಲ ಬರಲಿ ಎಂದು ಬಯಸುವದಿಲ್ಲಾ ಸರಿಯಾಗಿ ನೀರು ಸಿಕ್ಕರೆ ಸರ್ಕಾರಕ್ಕೆ ಸಾಲ ಕೊಡುವ ಶಕ್ತಿ ರೈತರಲ್ಲಿದೆ ಇದನ್ನು ಅರೀತುಕೊಂಡು ಮಾತನಾಡಬೇಕೆಂದ ಅವರು ಸರ್ಕಾರದಿಂದ ಸಾಲಮನ್ನಾ ಮಾಡಿದರೆ ಬಿಡಿಕಾಸು ಕೊಡಬಹುದು ಆದರೆ ಭೂಮಿ ತಾಯಿ ಬೆಳೆದರೆ ರೈತರು ಸಂಪತ್ಬರಿತರಾಗುತ್ತಾರೆ ಸರ್ಕಾರದ ಬಿಡಿಕಾಸಿನ ಮೇಲೆ ಯಾವ ರೈತರ ಜೀವನವು ನಿಂತಿಲ್ಲಾ ಇಡೀ ಜಿಲ್ಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕುಡಿಯುವ ನೀರಿನ ತೊಂದರೆ ತಪ್ಪಿಸಲು ಎಲ್ಲ ಕೇರೆಗಳಿಗೂ ನೀರು ಹರಿಸಿ ತುಂಬಲಾಗಿದೆ ಆದರೆ ತಾವು ತಮ್ಮ ಸರ್ಕಾರದಲ್ಲಿ ಸಚೀವರಾಗಿದ್ದೀರಿ ನೀರಾವರು ಯೋಜನೆಗಳನ್ನು ಜಾರಿಗೆ ತಂದು ರೈತರ ಜಮೀನುಗಳಿಗೆ ನೀರು ಕೊಡುವಂತಹ ಕೆಲಸ ಮಾಡಲಿ ಎಲ್ಲೋ ಒಂದು ಕಡೆಗೆ ಕಾಲುವೆಗೆ ನೀರು ಹರಿಬಿಟ್ಟರೆ ಜಮೀನಿಗೆ ನೀರು ಹರಿದಂತಾಗುವದಿಲ್ಲಾ ರೈತರ ಬಗ್ಗೆ ಸಾಕಷ್ಟು ಅರೀತುಕೊಂಡು ತಿಳಿದುಕೊಂಡಿರುವ ಸಚೀವ ಶಿವಾನಂದ ಪಾಟೀಲ ಅವರು ಇದರ ಬಗ್ಗೆ ಲಕ್ಷ ಕೊಡಬೇಕೆಂದ ಹೇಳಿದ ಕೂಚಬಾಳ ಅವರು ರೈತರ ಬಗ್ಗೆ ಕೀಳಾದ ದೃಷ್ಠಿಯಿಂದ ಮಾತನಾಡಿದ ಸಚೀವ ಶಿವಾನಂದ ಪಾಟೀಲ ಅವರು ಇಡೀ ರಾಜ್ಯದ ರೈತರಿಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಇದೇ ಶಿವಾನಂದ ಪಾಟೀಲ ಸಚೀವರು ರೈತರು ಆತ್ಮಹತ್ಯಗೆ ಸಂಬಂದಿಸಿ ರೈತರು ಪರಿಹಾರ ಸಿಗುತ್ತದೆ ಎಂದು ಆತ್ಮಹತ್ಯ ಮಾಡಿಕೊಳ್ಳುತ್ತಾರೆಂಬ ಪತ್ರಕರ್ತರ ಪ್ರಶ್ನೇಗೆ ಉಢಾಫೆ ಉತ್ತರವನ್ನು ನೀಡಿದ್ದರು. ಯಾಕೋ ರೈತರ ಬಗ್ಗೆ ಸಚೀವರು ಕೆಟ್ಟದಾಗಿ ಮಾತನಾಡುತ್ತಿರುವದನ್ನು ನೋಡಿದರೆ ಸರ್ಕಾರವು ಯಾವ ದಿಕ್ಕಿನಡೆಗೆ ಸಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ ರೈತರ ಶಾಪದಿಂದ ಸರ್ಕಾರವು ಬಹಳದನ ಉಳಿಯುವದಿಲ್ಲಾ ಅನ್ನಿಸುತ್ತದೆ ಅಧಿಕಾರದ ದರ್ಪದಿಂದ ಮಾತನಾಡುತ್ತಿರುವದು ಸಚೀವರಿಗೆ ಶೋಭೆ ತರುವದಿಲ್ಲಾ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಸಚೀವರ ಮೂಲಕ ರೈತರಿಗೆ ಕ್ಷಮೆ ಕೋರಿಸಬೇಕು ಇಲ್ಲದಿದ್ದರೆ ಸಚೀವರನ್ನು ತಮ್ಮ ಸಂಪುಟದಿಂದ ಕೈ ಬಿಡುವಂತಹ ಕೆಲಸ ಮಾಡಬೇಕೆಂದು ಆಗ್ರಹಿಸುವದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಜಾಬ್‍ದ ಬಗ್ಗೆ ಬಹಳಷ್ಟು ಆಸಕ್ತಿ ತೊರಿಸುತ್ತಿದ್ದಾರೆ ಹಿಜಾಬ್‍ಕ್ಕೆ ಸಂಬಂದಿಸಿ ನ್ಯಾಯಾಲಯದಲ್ಲಿ ಪ್ರಕರ್ಣವಿದೆ ಹೀಗಿದ್ದಾಗೂ ಕೂಡಾ ಹೀಜಾಬ್ ನಿಷೇದ ವಾಪಸ್ಸು ಪಡೆಯುತ್ತೇವೆ ತೊಡುವ ಬಟ್ಟೆ ಅವರ ಹಕ್ಕು, ಊಟ ಮಾಡುವದು ನಿಮ್ಮ ಹಕ್ಕು ಎಂದು ಶೈಕ್ಷಣಿಕ ಹಂತದಲ್ಲಿರುವ ವಿಧ್ಯಾರ್ಥಿಗಳಿಗೆ ಧರ್ಮದ ವಿಷ ಬೀಜ ಬಿತ್ತುವಂತಹ ಕೆಲಸ ಮಾಡುತ್ತಿದ್ದಾರೆ, ಹೀಜಾಬ ಧರಿಸಿ ಕೆಲವರು ಕಾಲೇಜ್‍ಗೆ ಹೋದರೆ ಇನ್ನೂ ಕೆಲವರು ಕೇಸರಿ ಶಾಲು ಬಟ್ಟೆ ಧರಿಸಿ ಹೋಗುತ್ತಾರೆ ಇದರಿಂದ ಶಾಲಾ ಕಾಲೇಜು ಹಂತದಲ್ಲಿ ಧರ್ಮದ ವಿಷಬೀಜ ಬಿತ್ತಿದಂತಾಗುತ್ತದೆ ಇದು ಅವರ ಅರಿವಿಗೆ ಇರಬೇಕು ಇದೇಲ್ಲವನ್ನು ಬಿಟ್ಟು ಕೇವಲ ಒಂದು ಸಮೂದಾಯ ಓಲೈಕೆಗಾಗಿ ಶೈಕ್ಷಣಿಕ ಹಂತದ ವಿಧ್ಯಾರ್ಥಿಗಳಿಗೆ ಕಲಿಕೆಯ ಬದಲು ಧರ್ಮ ಸಂಘರ್ಷದ ಹಾದಿ ತೋರಿಸಿದಂತಾಗುತ್ತದೆ ಸಿದ್ದರಾಮಯ್ಯನವರು ಆಲೋಚನೆ ಮಾಡಬೇಕೆಂದ ಅವರು ಕೂಡಲೇ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕೆಂದ ಅವರು ಸರ್ಕಾರದ ವೈಫಲ್ಯಗಳು ಅಭಿವೃದ್ದಿ ಕುಂಠಿತದಿಂದ ಜನರ ಕಣ್ಣಿಗೆ ಕಾಣುತ್ತಿರುವ ದಿಕ್ಕನ್ನು ಬದಲಿಸುವ ನಿಟ್ಟಿನಲ್ಲಿ ಹೇಳಿಕೆ ನೀಡುವದನ್ನು ನಿಲ್ಲಿಸಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಒತ್ತಾಯಿಸಿದರು.