ಸಚಿವ ಶಿವಾನಂದ ಪಾಟೀಲಗೆ ಅದ್ದೂರಿ ಸ್ವಾಗತ

ಬಸವನಬಾಗೇವಾಡಿ:ಜೂ.6: ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ ಅವರನ್ನು ಅಂಬೇಡ್ಕರ ವೃತ್ತದಲ್ಲಿ ಅಪಾರ ಸಂಖ್ಯೆಯ ಅಭಿಮಿನಿಗಳು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
ಅಂಬೇಡ್ಕರ ವೃತ್ತದಲ್ಲಿ ಆಗಮಿಸಿದ ಸಚಿವ ಶಿವಾನಂದ ಪಾಟೀಲ ಅವರು ಅಂಬೇಡ್ಕರ ಅವರ ಪುತ್ಹಳಿಗೆ ಮಾಲರ್ಪಣೆ ಮಾಡಿದರು. ನಂತರ ತೆರೆದ ಜಿಪ್ಸಿ ವಾಹನದಲ್ಲಿ ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಬಂದರು.
ಮೆರವಣಿಗೆಯಲ್ಲಿ ಕರಡಿ ಮಜಲು. ಡೊಳ್ಳಿನ ಮೇಳ. ಸೇರಿದಂತೆ ವಿವಿಧ ಕಲಾ ತಂಡಗಳು ಬಾಗವಹಿಸಿದ್ದವು. ಮೆರವಣಿಗೆಯಲ್ಲಿ ಶರಾವತಿಯ ಡಿ.ಜೆ ಸೌಂಡ್ ಸಾರ್ವಜನಿಕರ ಎದೆ ನಡುಗಿಸುವಂತಿತ್ತು.
ಮೆರವಣಿಗೆ ಉದ್ದಕ್ಕೂ ಅಲ್ಲಲ್ಲಿ ಕಾಂಗ್ರೆಸ ಕಾರ್ಯಕರ್ತರು ಪಟಾಕಿ ಸಿಡಿಸಿ ಸಚಿವರಿಗೆ ಪುಷ್ಪಾರ್ಚನೆ ಮಾಡಿ ತಮ್ಮ ಅಭಿಮಾನವನ್ನ ವ್ತಕ್ತಪಡಿಸಿದರು.
ಸಚಿವರ ಧರ್ಮ ಪತ್ನಿ ಭಾಗ್ಯಶ್ರೀ. ಪಾಟೀಲ. ಪುತ್ರಿ ಸಂಯುಕ್ತ ಪಾಟೀಲ. ಅಳಿಯ ಶಿವಕುಮಾರ. ಮೆರವಣಿಗೆಯಲ್ಲಿ ಭಾಗವಹಿಸಿ ಸಚಿವರ ಸಂಭ್ರಮದ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು.
ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ ನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪುತ್ಹಳಿಗೆ ಮಾಲಾರ್ಪಣೆ ಮಾಡಿದರು ನಂತರ ಮೆರವಣಿಗೆಯ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ಕಾರ್ಯಕ್ರಮ ನಿಗದಿತ ಸ್ಥಳ ಬಸವ ಭವನ ತಲುಪಿತು.
ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ. ಸುರೇಶ ಹಾರಿವಾಳ. ಅಶೋಕ ಹಾರಿವಾಳ. ಕಲ್ಲು ಸೂನ್ನದ. ಭರತ ಅಗರವಾಲ. ಬಸವರಾಜ ಹಾರಿವಾಳ. ಕಮಲಸಾಬ ಕೊರಬು. ಮಲ್ಲಿಕಾರ್ಜುನ ನಾಯಕ. ರಫೀಕ ಪಕಾಲಿ. ಬಂದೇನಮಾಜ ಡೊಲಚಿ. ಅಣ್ಣಾಸಾಹೇಬಗೌಡ ಪಾಟೀಲ. ಸುರೇಶಗೌಡ ಪಾಟೀಲ. ಸಂಜು ಕಲ್ಯಾಣಿ. ರವಿ ನಾಯ್ಕೊಡಿ. ಶೇಖರ ಗೊಳಸಂಗಿ. ಶಂಕರಗೌಡ ಬಿರಾದಾರ. ಹರೀಶ ಅಗರವಾಲ. ಬಸವರಾಜ ರಾಯಗೊಂಡ. ಬಸವರಾಜ ಕೋಟಿ. ಪರಶುರಾಮ ಅಡಗಿಮನಿ. ಲಕ್ಷ್ಮಿಬಾಯಿ ಶರಣಪ್ಪ ಬೆಲ್ಲದ. ಅನ್ನಪೂರ್ಣ ಸಂಜೀವ ಕಲ್ಯಾಣಿ. ಶುಭಾಂಗೀಣಿ ಗಾಯಕವಾಡ. ಸೇರಿದಂತೆ ಮುಂತಾದವರು ಇದ್ದರು.