(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ. 30: ಜಿಲ್ಲೆಯ ವಾಣಿಜ್ಯೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸಚಿವ ಬಿ. ನಾಗೇಂದ್ರ ಮತ್ತು ಶಾಸಕ ನಾರಾ ಭರತ್ ರೆಡ್ಡಿ ಅವರೊಂದಿಗೆ ಸಭೆಯೊಂದನ್ನು ಆಯೋಜಿಸಲಿದೆಂದು ಮಾಜಿ ಶಾಸಕ, ಸೂರ್ಯನಾರಾಯಣರೆಡ್ಡಿ ಹೇಳಿದ್ದಾರೆ.
ನಗರದಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ನಿನ್ನೆ ಭೇಟಿ ನೀಡಿದ ಅವರು ಸಂಸ್ಥೆಯ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಜಿಲ್ಲೆಯ ಕಾಟನ್ ಜಿನ್ನಿಂಗ್, ಕೋಲ್ಡ್ ಸ್ಟೋರೇಜ್‌ಗಳ ಮಾಲೀಕರ ಸಭೆಯನ್ನು ಸಧ್ಯದಲ್ಲೇ ಏರ್ಪಡಿಸಿ, ರಸ್ತೆ, ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಕೈಗಾರಿಕಾ ಪ್ರದೇಶದಲ್ಲಿ ಕಲ್ಪಿಸಲು ಸಚಿವರು, ಶಾಸಕರು ಜೊತೆ ಚರ್ಚೆ ನಡೆಸಿ, ಉದ್ಯಮಿಗಳ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಿದೆಂದು ಹೇಳಿದ್ದಾರೆ.
ನಂತರ ಅವರು ಸಂಸ್ಥೆಯ ಸ್ಕಿಲ್ ಸೆಂಟರ್‌ಗೆ ಭೇಟಿ ನೀಡಿ, ಅದರ ಸಿಇಓ ಡಾ. ಡಿ.ಎಲ್. ರಮೇಶ್ ಗೋಪಾಲ್ ಅವರಿಂದ ಸೆಂಟರ್‌ನ ಕಾರ್ಯನಿರ್ವಹಣೆಯ ಕುರಿತು ಮಾಹಿತಿ ಪಡೆದರು.
ಡಾ. ಡಿ.ಎಲ್. ರಮೇಶ್ ಗೋಪಾಲ್ ಅವರು ವೀಡಿಯೋ ಪ್ರೆಸೆಂಟೇಶನ್ ಮೂಲಕ ಸ್ಕಿಲ್ ಸೆಂಟರ್‌ನ ಕಾರ್ಯನಿರ್ವಹಣೆ, ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ವೃತ್ತಿ ಕೌಶಲ್ಯ ಹೆಚ್ಚಿಸುವಲ್ಲಿ ಸ್ಕಿಲ್ ಸೆಂಟರ್‌ನ ಕಾರ್ಯವೈಖರಿಯನ್ನು ವಿವರಿಸಿ, ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಾತ್ರ ಸ್ಕಿಲ್ ಕಾಲೇಜು ಪ್ರಾರಂಭಿಸಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಚರ್ಚೆ ನಡೆಸಿ, ಸ್ಕಿಲ್ ಸೆಂಟರ್‌ನ ಅಭಿವೃದ್ಧಿ, ಮೂಲಭೂತ ಸೌಲಭ್ಯಗಳು ಮತ್ತು ತುರ್ತು ಅಗತ್ಯಗಳ ಕುರಿತು ಅರಿತುಕೊಂಡರು ನಾರಾಯಣರೆಡ್ಡಿ. ಅವರನ್ನುವಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್ ಸನ್ಮಾನಿಸಿ. ಆಲದಹಳ್ಳಿಯಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ಉಪಾಧ್ಯಕ್ಷ ಬಿ. ಮಹಾರುದ್ರಗೌಡ, ಉಪಾಧ್ಯಕ್ಷರುಗಳಾದ ಎ. ಮಂಜುನಾಥ್, ಕೆ. ರಮೇಶ್ ಬುಜ್ಜಿ, ಕೆ.ಸಿ. ಸುರೇಶ್ ಬಾಬು, ಎಸ್. ದೊಡ್ಡನಗೌಡ, ಜಂಟಿ ಕಾರ್ಯದರ್ಶಿ ಸೊಂತ ಗಿರಿಧರ್, ಖಜಾಂಚಿ ಪಿ. ಪಾಲಣ್ಣ, ಸ್ಕಿಲ್ ಸೆಂಟರ್‌ನ ಚೇರ್ಮೆನ್ ನಾಗಳ್ಳಿ ರಮೇಶ್, ಪ್ರೆಸ್ ಅಂಡ್ ಮೀಡಿಯಾ ಕಮಿಟಿ ಚೇರ್ಮೆನ್ ಟಿ. ಶ್ರೀನಿವಾಸ್‌ರಾವ್, ಎಪಿಎಂಸಿ ಕಮಿಟಿ ಚೇರ್ಮೆನ್ ವಿ. ರಾಮಚಂದ್ರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.