
ಕಲಘಟಗಿ, ಜು. 10: ಬೆಂಗಳೂರಿನಲ್ಲಿ ನಿನ್ನೆ ನಿಧನರಾದ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಸಿ ಎಮ್ ನಿಂಬಣ್ಣನವರ್ ಅವರ ಪಾರ್ಥಿವ ಶರೀರಕ್ಕೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಇಂದು ಅಂತಿಮ ನಮನ ಸಲ್ಲಿಸಿದರು.
ನಿಂಬಣ್ಣನವರ್ ಅವರ ಮೃತದೇಹವನ್ನು ಬೆಂಗಳೂರಿನಿಂದ ಧಾರವಾಡಕ್ಕೆ ಸೋಮವಾರ ತರಲಾಗಿತ್ತು. ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಸಂತೋಷ್ ಲಾಡ್ ಅವರು ಗೌರವ ಸಲ್ಲಿಸಿದರು.
ನಿಂಬಣ್ಣನವರ್ ಅವರು ಹಿರಿಯ ರಾಜಕೀಯ ಮುತ್ಸದ್ದಿಯಾಗಿದ್ದು, ಕಲಘಟಗಿಯ ಕ್ಷೇತ್ರ ಅಭಿವೃದ್ಧಿಯ ಚಿಂತಕರು ಹಾಗೂ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆ ಕಲಘಟಗಿ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಲಾಡ್ ಅವರು ಸಂತಾಪದಲ್ಲಿ ತಿಳಿಸಿದ್ದಾರೆ.