ಹುಬ್ಬಳ್ಳಿ,ಜು.18: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಇವರಿಗೆ ಹುಬ್ಬಳ್ಳಿ-ಧಾರವಾಡ ,ಎಸ್. ಎಸ್. ಕೆ. ಶ್ರೀ ತುಳಜಾಭವಾನಿ ದೇವಸ್ಥಾನ, ಕೇಂದ್ರ ಪಂಚ ಸಮಿತಿ, ಪರವಾಗಿ ಸತ್ಕರಿಸಲಾಯಿತು.
ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ, ಸಾಮಾಜಿಕ ಹಾಗೂ ಧಾರ್ಮಿಕ ಉದ್ದೇಶಕ್ಕಾಗಿ ಕೇಂದ್ರ ಪಂಚ ಸಮಿತಿಗೆ ಹಂಚಿಕೆಯಾಗಿರುವ ನಿವೇಶನಕ್ಕೆ ಅತ್ಯಂತ ಕಡಿಮೆ ದರ ಆಕರಿಸಲು ಮಾನ್ಯ ಸರ್ಕಾರದಿಂದ ಅನುಮತಿ ದೊರಕಿಸಿ ಕೊಡಬೇಕೆಂದು ಹಾಗೂ ಎಸ್. ಎಸ್. ಕೆ. ಸಮಾಜದ ಅಧ್ಯಕ್ಷರು ಕಾಂಗ್ರೆಸ ಪಕ್ಷದ ಹಿರಿಯ ಮುಖಂಡರು ಕೆಪಿಸಿಸಿ ಸದಸ್ಯರಾಗಿರುವ ಸತೀಶ ಜಿ. ಮೇಹರವಾಡೆ ಇವರಿಗೆ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಚೇರ್ಮನ್ನರಾಗಿ ನಾಮಕರಣ ಮಾಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು. ಎಸ್. ಎಸ್. ಕೆ. ಸಮಾಜ ಕೋರಿರುವ ಈ ನಿವೇಶನಕ್ಕೆ ಸಂಬಂಧಪಟ್ಟಂತೆ ಅತ್ಯಂತ ಕಡಿಮೆ ದರ ಆಕರಿಸುವಂತೆ ಹಾಗೂ ಮುಂಬರುವ ಸಂಪುಟ ಸಭೆಯಲ್ಲಿ, ಈ ನಿವೇಶನದಲ್ಲಿ ಕೈಗೊಳ್ಳುವ ಧಾರ್ಮಿಕ ಅಭಿವೃದ್ಧಿ ಹಾಗು ಮಂದಿರ ನಿರ್ಮಾಣ ಕಾರ್ಯಕ್ಕಾಗಿ, ಎಸ್. ಎಸ್. ಕೆ .ಸಮಾಜಕ್ಕೆ ಅತ್ಯಂತ ಹೆಚ್ಚಿನ ಅನುದಾನ ನೀಡುವಂತೆ ತಾವು ಮುತುವರ್ಜಿ ವಹಿಸುವುದಾಗಿ ಸತೀಶ ಮೆಹರವಾಡೆ ಅವರಿಗೆ ಪಕ್ಷವು ಖಂಡಿತವಾಗಿಯೂ ಸೂಕ್ತ ಸ್ಥಾನಮಾನ ನೀಡುವುದು ಎಂದು ಸಚಿವರು ಭರವಸೆ ನೀಡಿದರು. ಹಾಗೂ ಕೆ.ಪಿಸಿಸಿ ಸದಸ್ಯರಾಗಿರುವ ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನೀಲ ಪಾಟೀಲ ಉಪಸ್ಥಿತರಿದ್ದರು.
ನಿಯೋಗದಲ್ಲಿ, ಕೇಂದ್ರ ಪಂಚ ಸಮಿತಿಯ ಚೀಫ್ ಟ್ರಸ್ಟಿಗಳಾದ ಸತೀಶ ಜಿ ಮೆಹರವಾಡೆ,ಉಪ ಮುಖ್ಯ ಧರ್ಮದರ್ಶಿಗಳಾದ ಕೆ.ಪಿ. ಪೂಜಾರಿ ಹಾಗೂ ಭಾಸ್ಕರ ಎನ್. ಜಿತೂರಿ, ಸಹ ಗೌರವ ಕಾರ್ಯದರ್ಶಿ ಟಿ.ವಿ.ಪೂಜಾರಿ, ಕೋಶಾಧಿಕಾರಿಗಳಾದ ಶ್ರೀಕಾಂತ ಆರ್. ಹಬೀಬ ಹಾಗೂ ಎಸ್ .ಎಸ್. ಕೆ. ಸಮಾಜದ ಮುಖಂಡರುಗಳಾದ ರಾಜ್ಯಾಧ್ಯಕ್ಷರಾದ ಅಶೋಕ ಎಸ್. ಕಾಟವೆ, ಎಸ್.ಎಸ್. ಕೆ. ಸಮಾಜದ ವಸಂತ ಎನ್. ಲದವಾ , ಬಾಳು ಟಿ.ಮಗಜಿಕೊಂಡಿ, ನಾಗೇಶ ಕಲಬುರ್ಗಿ ಹಾಗೂ ಕೇಂದ್ರ ಪಂಚ ಸಮಿತಿಯ ಟ್ರಸ್ಟಿಗಳಾದ ವ ಮಾಜಿ ಮುಖ್ಯ ಧರ್ಮದರ್ಶಿಗಳಾದ ಎಫ್. ಕೆ.ದಲಬಂಜನ ಹಾಗೂ ನೀಲಕಂಠಸಾ ಪಿ.ಜಡಿ, ಟ್ರಸ್ಟಿಗಳಾದ ಪ್ರಕಾಶ ಕಾಟವೆ, ಗಣಪತಸಾ ಹಬೀಬ, ಶಂಕರ ಬಿ.ಹಬೀಬ, ಮೋತಿಲಾಲಸಾ ಮಿಸ್ಕಿನ, ರಾಜು ಧರ್ಮದಾಸ, ಜಯರಾಮ ಪವಾರ, ನಾರಾಯಣ ಪವಾರ, ಪರಶುರಾಮಸಾ ಹಬಿಬ, ನಾರಾಯಣ ಜಿತೂರಿ, ಪ್ರೇಮನಾಥಸಾ ಧರ್ಮದಾಸ,ಶ್ರೀ ವಿಷ್ಣುಸಾ ಧೊoಗಡಿ , ಯುವ ಮುಖಂಡರುಗಳಾದ ಸಂತೋಷ ಬಾಕಳೆ ಗಜಾನನ ಹಬೀಬ, ವೀರೂ ಪಿ. ಕಠಾರೆ, ಸುಭಾಷ ಭಾಂಡಗೆ, ಮಿಂಟು ಮೇಹರವಾಡೆ,ಸುರೇಶ ವಾಳ್ವೆಕರ, ವಿನಾಯಕ ಮೇಹರವಾಡೆ, ಆನಂದ ಬಾಂಡಗೆ, ದೀಪಕ ಮೇಹರವಾಡೆ, ಕಾರ್ತಿಕ ಖೋಡೆ ಮತ್ತಿತರರು ಇದ್ದರು.