ಸಚಿವ ರಾಮುಲು ಹುಡುಕಿಕೊಡಿ ಅಭಿಯಾನ

ನಾಯಕನಹಟ್ಟಿ.ಸೆ.೭; ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಸಾರಿಗೆ ಸಚಿವರಾದ ಶ್ರೀರಾಮುಲು ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಕಾಂಗ್ರೇಸ್ ಮುಖಂಡರಾದ ವಾಸೀಂ ಅಹಮ್ಮದ್ ಅರೋಪಿಸಿದ್ದಾರೆ.ನಾಯಕನಹಟ್ಟಿ ಪಟ್ಟಣದ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಈ ಕ್ಷೇತ್ರಕ್ಕೆ ಅನುಧಾನತರುವಲ್ಲಿ ವಿಫಲರಾಗಿದ್ದರೇ ಜನರಿಗೆ ಸುಳ್ಳು ಅಶ್ವಾಸನೆ ನೀಡಿ ಮತದಾರರಿಗೆ ವಂಚನೆ ಮಾಡಿದ್ದಾರೆ. ಈ ಕ್ಷೇತ್ರ ಅಭಿವೃದ್ಧಿ ಪಡಿಸದೇ ಬೆಂಗಳೂರು ದೆಹಲಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಅರೋಪಿಸಿದರು.

 ಮುಂಬರುವ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗೇಸ್ ಜಯಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಬಿಜೆಪಿ ಹಿನಾಯವಾಗಿ ಸೋಲಲಿದೆ ಈ ಭಾಗದ ಯುವಕರು ಕಾಗ್ರೇಸ್ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಹೇಳಿದರು.