ಸಚಿವ ರಹಿಮ್ ಖಾನ್ ತಲೆದಂಡಕ್ಕೆ ಕೇಸರಿ ಪಡೆ ಬಿಗಿಪಟ್ಟು

ಬೀದರ್:ಜೂ.1: ಇತ್ತಿಚೀಗೆ ನಗರದ ಗುರುನಾನಕದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀರಾಮನ ಹಾಡಿನ ವಿಚಾರವಾಗಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ವಿದ್ಯಾರ್ಥಿಗಲ ಮೇಲೆ ಹಲ್ಲೆ ಮಾಡಿದ ಮುಸ್ಲಿಮ್ ಯುವಕರನ್ನು ಬಂಧಿಸುವ ಬದಲಾಗಿ ಹಲ್ಲೆಗೊಳಗಾದವರ ಮೇಲೆ ಕೇಸ್ ದಾಖಲಿಸಲು ಜಿಲ್ಲಾ ಪೋಲಿಸ್ ಇಲಾಖೆ ಮೇಲೆ ಒತ್ತಡ ಹೇರಿರುವ ಸಚಿವ ರಹಿಮ್ ಖಾನ್ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿ ಕೇಸರಿ ಪಾಳಯ ಇಂದು ಪ್ರತಿಭಟನೆ ಮೂಲಕ ಒತ್ತಾಯಿಸಿದೆ.
ಅಮಾಯಕ ಹಿಂದು ವಿದ್ಯಾರ್ಥಿಗಳ ಮೇಲೆ ಕೇಸ್ ದಾಖಲಿಸಿರುವುದನ್ನು ತೆರವುಗೊಳಿಸಿ ಹಲ್ಲೆ ಎಸಗಿದ ಮುಸಲ್ಮಾನ ಯುವಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಬಿಜೆಪಿ ಮುಖಂಡರು ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜೊತೆಗೆ ಹಿಂದು ಯುವತಿಯರು ಸೇರಿಕೊಂಡು ಉಗ್ರ ಹೋರಾಟ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿದ ಪ್ರತಿಭಟನಾಕಾರರು ಡಿ.ಸಿ ಗೋವಿಂದರೆಡ್ಡಿ ಮೂಲಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಪ್ರತಿಭಟನಾಕಾರರನ್ನು ಉದ್ದೇಸಿಸಿ ಮಾತರನಾಡಿರುವ ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ರಹಿಮ್ ಖಾನ್ ನಿಮ್ಮ ಅಪ್ಪ ಬಂದರೂ ಈ ಜಿಲ್ಲೆಯಲ್ಲಿ ಜೈಶ್ರೀರಾಮ ಹಾಡು ಹಾಡುವುದು ನಿಲ್ಲುವುದಿಲ್ಲ. ನಿಮ್ಮ ಮಗನಿಗೆ ದಾದಾಗಿರಿ ಮಾಡಲು ಬಿಟ್ಟಿರುವುದು ಕಳವಳಕಾರಿ ಘಟನೆ. ಇನ್ನು ಮುಂದೆ ಹಿಂದು ವಿದ್ಯಾರ್ಥಿಗಳು ಶಾಹಿನ್ ಕಾಲೇಜಿನಲ್ಲಿ ಹೋಗಿ ಜೈಶ್ರೀರಾಮ ಎಂದು ಘೋಷಣೆ ಕೂಗಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ರಹಿಮ್ ಖಾನ್ ಅವರನ್ನು ಮಂತ್ರಿಗಿರಿಯಿಂದ ಕೆಳಗಿಳಿಸಬೇಕು. ಬಸವಣ್ಣನ ಕರ್ಮಭೂಮಿಯಲ್ಲಿ ಕ್ರೌರ್ಯಕ್ಕೆ ಪ್ರಚೋದನೆ ನೀಡುತ್ತಿರುವ ದಮನಕಾರಿ ಶಕ್ತಿಗಳನ್ನು ಜಿಲ್ಲಾ ಪೋಲಿಸ್ ಇಲಾಖೆ ಯಾರ ಒತ್ತಡಕ್ಕೆ ಮಣಿಯದೇ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಚಾಮರಾಜನಗರದಿಂದ ಆರಂಭವಾದ ಈ ತುಷ್ಟಿಕರಣ ರಾಜಕೀಯ ಈಗ ಬೀದರ್ ವರೆಗೆ ಬಂದು ತಲುಪಿದೆ. ಸಿದ್ಧರಾಮಯ್ಯ ಅಧಿಕಾರಕ್ಕೇರಿದ ತಕ್ಷಣ ಮುಸಲ್ಮಾನ ಅಲ್ಪಸಂಖ್ಯಾತರಿಗೆ ದಾಂಧಲೆ ಮಾಡಲು ಎಲ್ಲಿಲ್ಲದ ಜೋಷ್ ಬರುತ್ತದೋ ಗೊತ್ತಿಲ್ಲ. ಚಾಮರಾಜನಗರದಲ್ಲಿ ಹನುಮಾನ ಚಾಲಸಾ ಪಠಿಸಿದವರ ಮೇಲೆ ಹಲ್ಲೆ, ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟ, ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಈಗ ಬೀದರ್‍ನಲ್ಲಿ ಜೈಶ್ರೀರಾಮ ಹಾಡಿದಕ್ಕೆ ಹಲ್ಲೆ. ಹೀಗಾದಾಗ ಈ ರಾಜ್ಯ ತೋಘಲಕ ಹಾಗೂ ಮೋಘಲ್ ದರ್ಬಾರವಾಗಿ ಮಾರ್ಪಡಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ ಮಾತನಾಡಿ, ರಹಿಮ್ ಖಾನ್ ಅಧಿಕಾರಕ್ಕೇರಿದಾಗಿನಿಂದ ಜಿಲ್ಲೆಯಲ್ಲಿ ದಾಂಧಲೆ, ತುಷ್ಟಿಕರಣ ರಾಜಕೀಯ ಮಿತಿ ಮೀರುತ್ತಿದೆ. ನಮ್ಮ ಜನರಿಗೆ ಮಳ್ಳು ಮಾಡಿ ನಾಲ್ಕು ಬಾರಿ ಶಾಸಕರಾಗಿ ಬೀದರ್‍ನ್ನು ಜಿಹಾದಿ ತಾಣವಾಗಿಸಲು ಪ್ರಚೋದಿಸುತ್ತಿದ್ದಾರೆ ಎಂದು ಹರಿಹೈದರು.
ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಮಾತನಾಡಿ, ನಗರದ ಶಾಹಿಮ್ ಕಾಲೇಜಿನಲ್ಲಿ ಇರುವ ಮಸಿದಿ ತೆರವುಗೊಳಿಸುವ ಬದಲು ಅಮಾಯಕ ಹಿಂದು ಕಾರ್ಯಕರ್ತರ ಮೇಲೆ ಪದೆ ಪದೆ ಹಲ್ಲೆ ಮಾಡಲಾಗುತ್ತಿದೆ. ಈಗ ಹಿಂದುಗಳ ಎಚ್ಚೆತ್ತಿದ್ದಾರೆ. ಪ್ರತಿ ಶನಿವಾರ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಭಗವಾ ಶಾಲು ಧರಿಸಿ ಜೈಧ್ರೀರಾಮ ಘೋಷಣೆ ಕೂಗಬೇಕೆಂದು ತಿಳಿಸಿದರು.
ಜಿ.ನ್.ಡಿ ಕಾಲೇಜು ವಿದ್ಯಾರ್ಥಿನಿ ವಿಜಯಲಕ್ಷ್ಮೀ ಮಾತನಾಡಿ, ಅಮಾಯಕ ನಮ್ಮ ಹಿಂದು ಅಣ್ಣಂದಿರ ಮೇಲೆ ಹಾಕಲಾದ ಕೇಸ್ ವಾಪಸ್ಸು ಪಡೆಯದಿದ್ದರೆ, ತಪ್ಪಿತಸ್ತ ಕಿಡಿಗೇಡಿಗಳನ್ನು ಬಮಧಿಸುವ ವರೆಗೆ ನಾವ್ಯಾರು ಕಾಲೇಜಿಗೆ ಹೋಗುವುದಿಲ್ಲವೆಂದು ಘೋಷಿಸಿದರು. ನಗರ ಸಭೆ ಸದಸ್ಯ ಶಶಿ ಹೊಸಳ್ಳಿ, ವಿಶ್ವ ಹಿಂದು ಪರಿಷತ್ ಮುಖಂಡರಾದ ರಾಮಕೃಷ್ಣನ್ ಸಾಳೆ, ವಿಕಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಮಾತನಾಡಿದರು.
ಬಿಜೆಪಿ ಪ್ರಮುಖರಾದ ಬಾಬುವಾಲಿ, ಶಿವರಾಜ ಕುದರೆ, ಪೀರಪ್ಪ ಔರಾದೆ, ಸೋಮಶೇಖರÀ ಪಾಟೀಲ ಗಾದಗಿ ಸೇರಿದಂತೆ ಬಿಜೆಪಿ ಇತರೆ ಪ್ರಮುಖರು, ಕಾರ್ಯಕರ್ತರು, ವಿವಿಧ ಹಿಂದುಪರ ಸಂಘಟನೆಗಳಾದ ವಿಶ್ವ ಹಿಂದು ಪರಿಷತ್, ಶ್ರೀರಾಮ ಸೇನೆ, ಬಜರಂಗದಳ, ಎ.ಬಿ.ವಿ.ಪಿ ಸೇರಿದಂತೆ ಇತರೆ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.