ಸಚಿವ ಮುನಿಯಪ್ಪರನ್ನು ಕಡೆಗಣಿಸಿದಲ್ಲಿ ಕಾಂಗ್ರೆಸ್‍ಗೆ ತಕ್ಕ ಶಾಸ್ತಿ

ಬೀದರ್:ಮಾ.29: ಏಳು ಸಲ ಸಂಸದರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ ಸೂಧೀಘ್ ರಾಜಕೀಯ ಅನುಭವ ಹೊಂದಿರುವ ನಮ್ಮ ಸಮಾಜದ ಹಿರಿಯ ಮುತ್ಸದ್ದಿ ಕೆ.ಹೆಚ್ ಮುನಿಯಪ್ಪರನ್ನು ಪಕ್ಷ ಕಡೆಗಣಿಸಿದ್ದೆ ಆದಲ್ಲಿ ಮುಂಬರುವ ದಿನಗಳಲ್ಲಿ ಇಡೀ ಮಾದಿಗ ಸಮಾಜ ಕಾಂಗ್ರೆಸ್ ವಿರೂದ್ಧ ತಿರುಗಿ ಬೀಳಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ರೋಹಿದಾಸ ಘೋಡೆ ಎಚ್ಚರಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಕೆ.ಹೆಚ್ ಮುನಿಯಪ್ಪ ನಮ್ಮ ಸಮಾಜದ ಹಿರಿಯ ನಾಯಕರು. ಅವರನ್ನು ರಾಜಕೀಯವಾಗಿ ಮುಗಿಸಲು ಮಾಜಿ ಸ್ಪೀಕರ್ ರಮೇಶಕುಮಾರ ಅವರು ಹಿಂಬಾಗಿಲಿನಿಂದ ಕಾಂಗ್ರೆಸ್ ವರಿಷ್ಟರಿಗೆ ಬ್ಲಾಕ್ ಮೇಲ್ ಮಾಡಲು ಹೊರಟಿರುವರು. ದೇಶದಲ್ಲಿ ಕೇವಲ ಎರಡು, ಮೂರು ಪ್ರತಿಶತದಷ್ಟಿರುವ ಬ್ರಾಹ್ಮಣ ಸಮುದಾಯದ ಮಾತು ಕೇಳಿ ನಮ್ಮ ದೊಡ್ಡ ಸಮಾಜಕ್ಕೆ ಎದುರು ಹಾಕಿಕೊಂಡಲ್ಲಿ ಕಾಂಗ್ರೆಸ್‍ಗೆ ತಕ್ಕ ಶಾಸ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಡಾ.ಖರ್ಗೆಯವರು ಈ ಭಾಗದ ಕಾಂಗ್ರೆಸ್‍ನ ಹಿರಿಯ ರಾಜಕಾರಣಿ. ಅವರು ಅಧ್ಯಕ್ಷರಾದ ಬಳಿಕ ಎಸ್.ಸಿ ಬಲ ಹಾಗೂ ಎಡ ಪಂಥಿಯರಿಗೆ ಸಮಾನವಾಗಿ ನೋಡುತ್ತಾರೆಂಬ ಆಶಾಭಾವವಿತ್ತು. ಆದರೆ, ಇಡೀ ಕಲ್ಯಾಣ ಕರ್ನಾಟಕದಲ್ಲಿ ಮಾದಿಗ ಸಮಾಜದ ಒಬ್ಬರಿಗೂ ನಿಗಮ ಮಂಡಳಿಗಳಲ್ಲಿ ಜಾಗ ಕೊಟ್ಟಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸಹ ನಮ್ಮ ಸಮಾಜದವರಿಗೆ ಟಿಕೇಟ್ ನೀಡಲಿಲ್ಲ. 70 ವರ್ಷಗಳಿಂದ ಯಾವುದೇ ಫಲಾಪೆಕ್ಷೆ ಇಲ್ಲದೆ ಕಾಂಗ್ರೆಸ್‍ಗೆ ಮತ ನೀಡಿದ ಜನಾಂಗ ಎಂದರೆ ಅದು ಮಾದಿಗ ಜನಾಂಗ. ನಮ್ಮ ಸಮಾಜಕ್ಕೆ ಅನ್ಯಾಯ ಮಾಡಲು ಹೊರಟಿದರೆ ಅದರ ಪರಿಣಾಮವೇ ಬೇರೆ ಆಗಲಿದೆ. ಇನ್ನು ಕಾಲ ಮಿಂಚಿಲ್ಲ. ಕೆ.ಹೆಚ್ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕೋಲಾರ ಲೋಕಸಭೆ ಟಿಕೇಟ್ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ವಿರೂದ್ಧ ಗ್ರಾಮ, ಗ್ರಾಮಗಳಿಗೆ ಅಡ್ಡಾಡಿ ನಮ್ಮ ಜನರನ್ನು ಜಾಗೃತರಾಗಿ ಮಾಡುವ ಮೂಲಕ ಪಕ್ಷದ ವಿರೂದ್ಧ ಬೀದಿಗಳಿಯುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ, ಹಿರಿಯರಾದ ಶಾಮಣ್ಣ ಬಂಬುಳಗಿ ಹಾಗೂ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕಮಲಾಕರ ಹೆಗಡೆ ಮಾತನಾಡಿದರು.
ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ, ಜಿಲ್ಲಾ ಕಾರ್ಯಧ್ಯಕ್ಷ ದತ್ತಾತ್ರಿ ಜ್ಯೋತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಶೀಲ ಕಲವಾಡೆ, ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ವಿರಶೆಟ್ಟಿ ಬೀದರ್ ತಾಲೂಕು ಅಧ್ಯಕ್ಷ ರವಿ ಸೂರ್ಯವಂಶಿ, ಹುಮನಾಬಾದ್ ತಾಲೂಕಾ ಅಧ್ಯಕ್ಷ ಗೊರಖ ಜೋಶಿ, ಸಮಾಜದ ಮುಖಂಡರಾದ ರಾಜು ಸಾಂಗ್ಲೆ, ಪ್ರದೀಪ ಬಾಜಿ, ಪ್ರಭು ನಮದಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಖರ್ಗೆ ರಾಷ್ಟ್ರಾಧ್ಯಕ್ಷರಾಗಿದ್ದಾಗಿನಿಂದ ಮಾದಿಗರಿಗೆ ತುಳಿಯುವ ಕಾರ್ಯ ಮಾಡುತ್ತಿದ್ದಾರೆ: ಫರ್ನಾಂಡಿಸ್
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ್ ಖರ್ಗೆಯವರು ಅಧಿಕಾರ ವಹಿಸಿಕೊಂಡಿದಾಗಿನಿಂದ ಮಾದಿಗ ಸಮಾಜವನ್ನು ಚೆನ್ನಾಗುಇ ತುಳಿಯಲು ಹೊರಟಿದ್ದಾರೆ ಎಂದು ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಕಲ್ಯಾಣ ಕರ್ನಾಟಕದಲ್ಲಿ ಒಂದು ಸಹ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿಲ್ಲ, ಮಂತ್ರಿ ಮಂಡಳದಲ್ಲೂ ಹೆಚ್ಚಿನ ಪ್ರಾತಿನಿಧ್ಯ ನೀಡಿಲ್ಲ. ನಮ್ಮ ಬೇಡಿಕೆಗಳಿಗಿಂತೂ ಕ್ಯಾರೆ ಎನ್ನುತ್ತಿಲ್ಲ. ಈಗ ಮಾಜಿ ಸ್ಪೀಕರ್ ರಮೇಶಕುಮಾರ ಅವರ ಮಾತು ಕೇಳಿ ನಮ್ಮ ಸಮಾಜದ ನಾಯಕರಾದ ಕೆ.ಹೆಚ್ ಮುನಿಯಪ್ಪ ಕುಟುಂಬವನ್ನು ರಾಜಕೀಯದಿಂದ ದೂರ ಇಡುವ ಹುನ್ನಾರ ನಡೆಯುತ್ತಿದೆ. ನಮ್ಮ ಸಮಾಜವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರ ಕೈವಾಡಿದ್ದು, ಗುರುವಾರ ಸಂಜೆಯೊಳಗೆ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ನ ಅವರಿಗೆ ಲೋಕಸಭೆ ಟಿಕೇಟ್ ನೀಡದಿದ್ದರೆ ಮಾದಿಗ ಸಮಾಜ ಲೋಕಸಭೆ ಚುನಾವಣೆಯಲ್ಲಿ ತನ್ನ ತಾಕತ್ತು ತೋರಿಸುವುದು ಗ್ಯಾರಂಟಿ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಸಮಾಜದ ಒಬ್ಬರಿಗೂ ಎಮ್.ಎಲ್.ಸಿ ಮಾಡಲಿಲ್ಲ. ಎಲ್ ಹಣಮಂತಯ್ಯ ಅವತರಿಗೆ ಮತ್ತೆ ರಾಜ್ಯಸಭೆ ಟಿಕೇಟ್ ಕೊಡಲಿಲ್ಲ. ಎಸ್.ಸಿ ಬಲಪಂಥಿಯವರಾದ ಅರವಿಂದ ಅರಳಿ ಅವರಿಗೆ ಎಮ್.ಎಲ್.ಸಿ, ಬಕ್ಕಪ್ಪ ಕೋಟೆ ಅವರಿಗೆ ಹಿಂದೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡಿದ್ದರು. ಒಟ್ಟಾರೆ ತುಷ್ಟಿರಾಜಕಾರಣ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಆಪಾದಿಸಿದರು.