ಸಚಿವ ಬೋಸರಾಜು ಅವರಿಂದ ಗದ್ವಾಲ್ ರಸ್ತೆ ವೀಕ್ಷಣೆ

ರಾಯಚೂರು.ಸೆ.೦೩- ರಾಯಚೂರಿನ ಗದ್ವಾಲ್ ಸಂಪರ್ಕ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್.ಬೋಸರಾಜು ಅವರು ವೀಕ್ಷಿಸಿ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತೇದಾರರಿಗೆ ಖಡಕ್ ಸೂಚನೆ ನೀಡಿದರು.
ದಿಢೀರ್ ಗದ್ವಾಲ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿದ ಸಚಿವರು ಗುತ್ತೆದಾರರು ಹಾಗೂ ಅಧಿಕಾರಿಗಳಿಗೆ ಮಾತನಾಡಿ, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಜವಾಬ್ದಾರಿಯಿಂದ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಬೇಕೆಂದು ಅಧಿಕಾರಿಗಳಿಗೆ, ಗುತ್ತೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಜಯಣ್ಣ, ಕೆ.ಶಾಂತಪ್ಪ, ರವಿ ಪಾಟೀಲ್, ಜಿಂದಪ್ಪ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಲಕ್ಷ್ಮೀ ರಡ್ಡಿ, ನರಸಿಂಹಲು ಮಾಡಗಿರಿ, ಬಿ.ರಮೇಶ, ಜಿ.ತಿಮ್ಮಾರಡ್ಡಿ, ಕುರಬದೊಡ್ಡಿ ಅಂಜನೇಯ್ಯ, ಬಸವರಾಜ ಪಟೀಲ್ ಅತ್ತನೂರು, ಹನುಮಂತ ಹೋಸೂರು, ತಾಯನಗೌಡ ಸೇರಿದಂತೆ ಅನೇಕರಿದ್ದರು.