ಸಚಿವ ಬೈರತಿ ಸುರೇಶ್ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

ಕೋಲಾರ, ಜೂ,೧೮-ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ವೆಂಕಟ್‌ರಾಜ್ ರವರು ಪ್ರವಾಸೋದ್ಯಮ ಇಲಾಖೆಯಿಂದ ತಯಾರಿಸಲಾದ ಕೋಲಾರ ಜಿಲ್ಲಾ ಪ್ರವಾಸಿ ತಾಣಗಳ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಾಫಿ ಟೇಬಲ್ ಪುಸ್ತಕವು ೧೩೪ ಪುಟಗಳಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳನ್ನು, ಐತಿಹಾಸಿಕ ಹಾಗೂ ಪೂಜಾ ಸ್ಥಳಗಳನ್ನು, ನೈಸರ್ಗಿಕ ತಾಣಗಳನ್ನು, ಜಿಲ್ಲೆಯಲ್ಲಿ ಆಚರಿಸಲಾಗುವ ಹಬ್ಬ ಹರಿದಿನಗಳು, ಜಿಲ್ಲೆಯ ಜನರ ಆಹಾರ ವೈವಿಧ್ಯಗಳು, ಪ್ರಮುಖ ವ್ಯಕ್ತಿಗಳ ಪರಿಚಯ ಹಾಗೂ ಪ್ರಮುಖ ವಾಣಿಜ್ಯ ಚಟುವಟಿಕೆಗಳು ಇವುಗಳ ಛಾಯಾಚಿತ್ರಗಳು ಹಾಗೂ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ಇದರ ಹಾರ್ಡ್ ಕಾಪಿಗಳು ಶೀಘ್ರದಲ್ಲೇ ಜನರ ಕೈಸೇರಲಿದ್ದು, ಜನ ಸಾಮಾನ್ಯರು ಜಿಲ್ಲೆಯ ಮಾಹಿತಿಯನ್ನು ಈ ಪುಸ್ತಕದಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಭಿಪ್ರಾಯಪಟ್ಟರು.