
ಕಲಬುರಗಿ,ನ,21: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಐ ಟಿ ಬಿಟಿ ಸಚಿವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಪ್ರಿಯಾಂಕ ಖರ್ಗೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಮಾಜ ಸೇವಕ ಆನಂದ ವಾರಿಕ ಅವರ ನೇತೃತ್ವದಲ್ಲಿ
ಕಲಬುರಗಿ ನಗರದಲ್ಲಿರುವ ಮಹಾದೇವಿ ತಾಯಿ ವೃದ್ಧಾಶ್ರಮ ಹಾಗೂ ಭಾಗ್ಯಜ್ಯೋತಿ ವೃದ್ಧಾಶ್ರಮದ ವೃದ್ಧ ಸದಸ್ಯರಿಗೆ ಯುವ ಶಕ್ತಿಗಳಾದ ಮಹೇಶ ಪಾಣೆಗಾಂವ ವಿದ್ಯಾಸಾಗರ ಹಾಬಾಳ ಅಂಬರೀಷ್ ಇಟಗಾ ಗುಂಡು ಅಣಕಲ್ ಅನೀಲಕುಮಾರ ಗೋಗಿ ಸುನೀಲ್ ನರಸಿಂಹಲು ಅವರಿಂದ ಉಚಿತ ಕ್ಷೌರ ಸೇವೆ ಹಾಗೂ ನವಜೀವನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಹಾಗೂ ಬೆಳಗಿನ ಉಪಹಾರ ವಿತರಿಸಲಾಯಿತು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಜಗದೇವ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು ಅತಿಥಿಗಳಾಗಿ ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ ರೆಡ್ಡಿ ಸೋಮಶೇಖರ್ ಹಿರೆಮಠ ರಾಜು ಇಂಡಿ ಮಹಿಬೂಬ ಪಟೇಲ್ ಗೊಂಧಳಿ ಸಮುದಾಯದ ಅಧ್ಯಕ್ಷರಾದ ಸಂತೋಷ ಸಿಂಧೆ ಪ್ರಕಾಶ್ ಹುಣಸಿಗೇರಾ ಉಪಸ್ಥಿತರಿದ್ದರು.