ಸಚಿವ ಪಾಟೀಲ್ ಕ್ಷಮೆಯಾಚಿಸಲಿ: ಜೋಶಿ


ಹುಬ್ಬಳ್ಳಿ, ಡಿ 25: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾನಂದ ಪಾಟೀಲ್ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ದೊಡ್ಡ ಸ್ಥಾನದಲ್ಲಿದ್ದವರು ಹೀಗೆ ಮಾತನಾಡಬಾರದು ಎಂದರು.
ರೈತರಿಗೆ ಮಳೆ ಬರಬೇಕು. ಬೆಳೆ ಸಮೃದ್ಧವಾಗಿ ಬೇಕು. ಆಗ ಅವರು ಯಾರ ಹತ್ತಿರವೂ ಕೈಚಾಚುವುದಿಲ್ಲ ಎಂದು ಅವರು ನುಡಿದರು.