ಸಚಿವ ಪಾಟೀಲರಿಗೆ ಮನವಿ ಸಲ್ಲಿಸಿದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.31: ಜಿಲ್ಲಾ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ಜಿಪಿಟಿ)ದಿಂದ ಕರ್ನಾಟಕ ಸರ್ಕಾರದ ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆಯ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಇಂದು ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಸನ್ಮಾನಿಸಿ,ಮನವಿ ಪತ್ರ ಸಲ್ಲಿಸಲಾಯಿತು.
ಇತ್ತೀಚೆಗೆ ಜರುಗಿದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಿಂದ ವಂಚಿತರಾದ ಜಿಪಿಟಿ-ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮರು ಕೌನ್ಸಲಿಂಗ್ ನಡೆಸಲು ಒತ್ತಾಯಿಸಿ, ಸಚಿವರ ಮೂಲಕ ಶಿಕ್ಷಣ ಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಹಕ್ಕೊತ್ತಾಯವನ್ನು ಮಂಡಿಸಿ, ಸೂಕ್ತ ಕ್ರಮವಹಿಸಿ, ಮರುಕೌನ್ಸಲಿಂಗ್ ನಡೆಸಲು ಅವಕಾಶ ಕಲ್ಪಿಸಬೇಕೆಂಬ ಆಶಯ ಜಿಪಿಟಿ-ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರದ್ದಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಕಂಬಾರ ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಅತೀ ಶೀಘ್ರದಲ್ಲೇ ಶಿಕ್ಷಣ ಸಚಿವರ ಹಾಗೂ ಸರ್ಕಾರದ ಗಮನಕ್ಕೆ ತಂದು, ಈ ವರ್ಗಾವಣೆ ಸಮಸ್ಯೆಯನ್ನು ಸಮಂಜಸವಾಗಿ ಪರಿಹರಿಸಿ, ಜಿಪಿಟಿ-ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೌನ್ಸಲಿಂಗ್ ನಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ತಿಳಿಸುತ್ತಾ, ವಿಜಯಪುರದ ಜಿಲ್ಲಾ ಉಪನಿರ್ದೇಶಕರಿಗೆ ಫೆÇೀನ್ ಕರೆ ಮಾಡಿ ಈ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಲಕ್ಷ್ಮಿಕಾಂತ ಅಹಿರಸಂಗ,ಮಾಧವ ಗುಡಿ, ಮಹಾಂತೇಶ ಪಾಟೀಲ, ಸಂತೋಷ ಬಂಡೆ, ಸತೀಶ ಬಗಲಿ, ಸುಭಾಸ ತೋಳನೂರ, ಶಿವರಾಜ ಪಾಟೀಲ,
ಶಂಕರಲಿಂಗ ಪಾಟೀಲ, ಬಾಬಣ್ಣ ಹಡಪದ, ರೋಜಿಂದಾgಸಿಕಂದರ್ ಮಗಳೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.