ಸಚಿವ ನಾಗೇಂದ್ರ ಮಧ್ಯ ಪ್ರವೇಶ ಕಕ್ಕಬೇವನಹಳ್ಳಿಯ 106 ಎಕರೆಗೆ ಹರಿಯಿತು ನೀರು

(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.16: ಸಚಿವ ಬಿ.ನಾಗೇಂದ್ರ ಅವರ ಮಧ್ಯಸ್ಥಿಕೆಯಿಂದ ಕಳೆದ 12 ವರ್ಷಗಳಿಂದ ನೀರು ಕಾಣದಿಂದ 106 ಎಕರೆ ಈನಿಗೆ ನೀರು ದೊರಕಿಸಿ ಕೊಟ್ಟಿರುವ ಘಟನೆ ನಡೆದಿದೆಕುರುಬ ಸಮುದಾಯದ ಮುಖಂಡ ಅಲ್ಲಿಪುರ ಮೋಹನ್ ಅವರ ಹೇಳಿಕೆಯಂತೆ. ತಾಲೂಕಿನ ಕಕ್ಕಬೇವನಹಳ್ಳಿಯಲ್ಲಿ ವ್ಯಕ್ತಿ ನಾರಾಯಣಪ್ಪ ಎಂಬಾತನ  ದೌರ್ಜನ್ಯದಿಂದ ರಸ್ತೆ ಮತ್ತು ಕಾಲುವೆ ಬಂದ್ ಮಾಡಿ 106 ಎಕರೆ ಜಮೀನು ಬೀಳು ಬೀಳುವಂತೆ ಆಗಿತ್ತು.ಇದರಿಂದ ಕೆಳ ಭಾಗದ ತಮ್ಮದೇ ಸಮುದಾಯದ ರೈತರು ಕೃಷಿ ಮಾಡಲಾಗದೇ ಸಂಕಷ್ಟದಲ್ಲಿದ್ದರು. ಇದನ್ನು ಗಮನಕ್ಕೆ ತಂದ ಮೇಲೆ ಸಚಿವರು  ಮಧ್ಯಪ್ರವೇಶ ಮಾಡಿ, ದೌರ್ಜನ್ಯ ಮಾಡುತ್ತಿದ್ದವರ ಮನವೊಲಿಸಿ, ರಸ್ತೆ, ಕಾಲುವೆ ಮಾಡಿ ಪೊಲೀಸ್ ಬಂದೋ ಬಸ್ತಿನಲ್ಲಿ  ನೀರು ಬಿಡಿಸಿದ್ದಾರೆ. ಇದರಿಂದ ಸಂಕಷ್ಟದಲ್ಲಿದ್ದ ರೈತರು ಸಂತಸ ಪಟ್ಟಿದ್ದಾರೆಂದರು.