ಸಚಿವ ನಾಗೇಂದ್ರಗೆ ಇತಿಹಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷ ಬಸವರಾಜ್ ಸ್ವಾಗತ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.04: ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಮುಖ್ಯ ಮಂತ್ರಿ
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯುವಜನಸೇವೆ ಮತ್ತು ಕ್ರೀಡೆ ಹಾಗು ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ. ಮೊದಲ ಬಾರಿಗೆ ಬಳ್ಳಾರಿ ನಗರಕ್ಕೆ ನಿನ್ನೆ ಸಂಜೆ ಆಗಮಿಸಿದ ಸಚಿವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿ  ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರು ವಾಲ್ಮೀಕಿ ಸರ್ಕಲ್ ಬಳಿ  ಮೈಸೂರು ಪೇಟ ತೊಡಿಸಿ, ತಮ್ಮ ಸಂಶೋಧನಾ ಲೇಖನಗಳ ಕೃತಿ ನೀಡಿ,  ಶಾಲು ಹೊದಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಚಿವ ತಂದೆ ಬಿ.ಆಂಜನೇಯಲು ಅವರ ನೇತೃತ್ವದಲ್ಲಿ ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದನ್ನು ಕೇಳಿ  ಸಚಿವ ನಾಗೇಂದ್ರ ಸಂತಸಪಟ್ಟರು.