ಸಚಿವ ದರ್ಶನಾಪುರರಿಗೆ ಜಿಲ್ಲಾ ಉಸ್ತುವಾರಿ ನೇಮಕ ಅಭಿಮಾನಿಗಳಿಂದ ಸಂಭ್ರಮಾಚರಣೆ

ಶಹಾಪುರ:ಜೂ.13: ಸಣ್ಣ ಕೈಗಾರಿಕೆ ಸಾರ್ವಜಿಕ ಉಧ್ಯಮಿಗಳ ಮಂತ್ರಿ ಶಹಾಪುರ ಮತಕ್ಷೇತ್ರದ ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪು ರವರಿಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ನ್ನಾಗಿ ನೇಮಕ ಮಾಡಿದ್ದಕ್ಕಾಗಿ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದರ್ಶನಾಪುರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

ಜಿಲ್ಲಾ ಅಭಿವೃದ್ಧಿಗೆ ಜಿಲ್ಲೆಯ ಸ್ಥಳಿಯ ಸಚಿವರಿಗೆ ನೇಮಕ ಮಾಡಿದ್ದು ಸಂತೋಷ ಮೂಡಿಸಿದೆ. ಎಂದು ಕಾಂಗ್ರೆಸ್ ಪಕ್ಷಕ್ಕೆ ಜೈಕಾರಗಳನ್ನು ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂಧರ್ಬದಲ್ಲಿ ತಾಲುಕಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾದ ಮೌನೇಶ ನಾಟೀಕಾರ. ಜಮಾದಾರ.ದೇವಣ್ಣ ತೋಟಗೇರ, ಅಲ್ಲಾ ಪಟೇಲ್ ಮಕ್ತಾಪುರ, ಬಸವರಾಜ ಕಡಗಂಚಿ,. ಮಲ್ಲಯ್ಯ ಸ್ವಾಮಿ ಇಟಗಿ ತಿರುಪತಿ ಬಾಣತಿಹಾಳ, ರಾಮಣ್ಣ ಸಾಧ್ಯಾಪುರ, ರಾಜುಗೌಡ ಯತ್ನಾಳ್, ಲಕ್ಷ್ಮಣ ದೇವಿನಗರ, ವೀರೇಶಮದರಿ, ಮಂಜು ಲಿಂಗದಳ್ಳಿ ಸಿದ್ದಪ್ಪ ವಿಜಯಕುಮಾರ ಸಾಲಿಮನಿ
ಮಲ್ಲಣಗೌಡ ತಿಪ್ಪನಟಗಿ, ಅರವಿಂದ ಉಪ್ಪಿನ, ಭೀಮರಾಯ ಜುನ್ ಸೇರಿದಂತೆ ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದರು.