ಸಚಿವ ಡಾ.ಸುಧಾಕರ್ ರಾಜೀನಾಮೆಗೆ ಹೆಚ್‌ಡಿಕೆ ಆಗ್ರಹ

ಕೋಲಾರ,ಸೆ,೧೯-ಬಳ್ಳಾರಿ ವಿಮ್ಸ್‌ನಲ್ಲಿ ಇಬ್ಬರು ಅಮಾಯಕರ ಬಲಿ ತೆಗೆದುಕೊಳ್ಳಲಾಗಿದೆ, ಇಬ್ಬರ ಮರಣಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಅಲ್ಪಸಂಖ್ಯಾತರ ಸಮಾವೇಶದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರಕ್ಕೆ ನೈತಿಕತೆ ಇದ್ದಿದ್ದರೆ ಆರೋಗ್ಯ ಸಚಿವರು ಈಗಾಗಲೆ ರಾಜೀನಾಮೆ ಕೊಡಬೇಕಾಗಿತ್ತು ಎಂದು ಒತ್ತಾಯ ಮಾಡಿದರು.
ವೈದ್ಯಕೀಯ ಇಲಾಖೆಯಲ್ಲಿ ನೇಮಕಾತಿ ಅಕ್ರಮದ ಫಲವೇ ಇಂತಹ ಬೆಳವಣಿಗೆಗೆ ಕಾರಣ, ವೈದ್ಯಕೀಯ ಇಲಾಖೆಯಲ್ಲಿ ನೇಮಕಾತಿ ಹಗರಣ ಎಂದು ಎಚ್.ಡಿ.ಕೆಹೊಸ ಬಾಂಬ್ ಸಿಡಿಸಿದರು, ಅಲ್ಲದೆ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರ ಸಾವು ನಿಜಕ್ಕೂ ಬೇಸರ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತೆಲಂಗಾಣ ರಾಜ್ಯದಲ್ಲಿ ಶೇ.೪೦ ಪ್ಲೆಕ್ಸ್ ವಿಚಾರಕ್ಕೆ ಪ್ರತಿಕೃಯೆ ನೀಡಿದ ಎಚ್‌ಡಿಕೆ ಸಿಎಂ ಬಸವರಾಜ್ ಬೊಮ್ಮಾಯಿ ಕಾಲೆಳೆದ್ರು. ರಾಜ್ಯಕ್ಕೆ ಅವಮಾನ ಆಗಲು ರಾಜ್ಯ ಬಿಜೆಪಿಯೇ ಕಾರಣ ಇದಕ್ಕಿಂತ ಅವಮಾನ ಬೇರೊಂದಿಲ್ಲ ಎಂದರಲ್ಲದೆ ಇಂದು ರಾಜ್ಯದ ಬೀದಿ ಬೀದಿಗಳಲ್ಲಿ ೪೦% ಬಗ್ಗೆ ಚರ್ಚೆಯಾಗ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.