ಸೇಡಂ, ಮೇ,28: ಬೆಂಗಳೂರನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಂತ್ರಿಮಂಡಲದಲ್ಲಿ ಎರಡನೇ ಬಾರಿಗೆ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸೇಡಂ ತಾಲೂಕಿನ ಅಭಿವೃದ್ಧಿ ಹರಿಕಾರ ಸಚಿವ ಡಾ.ಶರಣಪ್ರಕಾಶ್ ಪಾಟೀಲರಿಗೆ ಅವರ ಧರ್ಮಪತ್ನಿ ಶ್ರೀಮತಿ ಭಾಗ್ಯಶ್ರೀ ಹಾಗೂ ಸಹೋದರ ಜೈಪ್ರಕಾಶ್ ಬಸವರಾಜ್ ಪಾಟೀಲ್ ಅವರ ಸಮ್ಮುಖದಲ್ಲಿ ಮುಧೋಳ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಧುಸೂದನ್ ರೆಡ್ಡಿ ಮಾಲಿ ಪಾಟೀಲ್ ರವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದನೆಗಳು ಸಲ್ಲಿಸಿದರು. ಈ ವೇಳೆಯಲ್ಲಿ ಲಕ್ಷ್ಮಿಕಾಂತ್ ರಾವ್ ಕುಲಕರ್ಣಿ, ಮುಧೋಳ ಬ್ಲಾಕ್ ಅಧ್ಯಕ್ಷರಾದ ರವೀಂದ್ರ ನಂದಿಗಾಮ, ಶ್ರೀನಿವಾಸ ರೆಡ್ಡಿ ಚಂದಾಪುರ್ ವಿಠ್ಠಲ್ ಕುಂಬಾರ್ ಅಶೋಕ್ ಪಿರಂಗಿ ಇದ್ದರು.