ಸಚಿವ ಜಮೀರ್ ಅಹಮ್ಮದ್ ಜೂ 19 ಕ್ಕೆ ಹೊಸಪೇಟೆಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.15: ವಕ್ಪ್, ವಸತಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಅವರು ಜೂನ್ 19 ರಿಂದ ಮೂರು ದಿನಗಳ ಕಾಲ‌ ವಿಜಯನಗರ ಜಿಲ್ಲೆಯಲ್ಲಿನ ವಿವಿಧ ಕಾರ್ಯಕ್ರಮ ಸಭೆಗಳಲ್ಲಿ‌ ಪಾಲ್ಗೊಳ್ಳಲಿದ್ದಾರೆ.
ಜೂನ್ 19 ರಂದು ಸಂಜೆ 5.30 ಕ್ಕೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ ಮತ್ತು ಸಾರ್ವಜನಿಕರ ಕೊಂದು ಕೊರತೆಗಳನ್ನು ಆಲಿಸಲಿದ್ದಾರೆ. ನಂತರ ಸರ್ಕಾರಿ ವಸತಿ ಗೃಹದಲ್ಲೇ ತಂಗಲಿದ್ದಾರೆ.
ಮರುದಿನ ಜೂನ್  20   ಬೆಳಿಗ್ಗೆ 11 ಕ್ಕೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 3 ರಿಂದ ನೂತನವಾಗಿ ನಿರಗಮಾಣ ಆಗುತ್ತಿರುವ ಡಿಸಿ, ಎಸ್ಪಿ ಕಚೇರಿಗಳ ಕಟ್ಟಡ ಬಳಿಕ 250 ಹಾಸಿಗೆಗಳ ನೂತನ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪರಿಶೀಲಿಸಲಿದ್ದಾರೆ.
ಜೂನ್  21 ರಂದು ಬೆಳಿಗ್ಗೆ 11 ಕ್ಕೆ  ಹಂಪಿಗೆ  ತೆರಳಿ ಅಲ್ಲಿ ಜಿ.20 ಶೃಂಗ ಸಭೆಯ ಸಿದ್ದತೆ  ಮತ್ತು  ಸ್ಥಳ ಪರಿಶೀಲನೆ ಮಾಡಲಿದ್ದು ನಂತರ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.