ಸಚಿವ ಕತ್ತಿಗೆ ನೈತಿಕತೆ ಇದ್ದರೇ ರಾಜೀನಾಮೆ ನೀಡಲಿ

ಆಲಮೇಲ್:ಮೇ.1:ಬಡಜನರ ಅನುಕೂಲಕ್ಕಾಗಿ ರೂಪಿಸಿರುವ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಪಡಿತರ ಅಕ್ಕಿಯನ್ನು 7ಕೆಜಿಯಿಂದ 2 ಕೆಜಿಗೆ ಇಳಿಸಲಾಗಿದೆ ಇದು ಖಂಡನೀಯ. ಹೆಚ್ಚಿನ ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸಾಯುವವರು ಸಾಯಲಿ ಎಂದು ಹೇಳಿಕೆ ನೀಡಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ ಕತ್ತಿ ನೀಡಿದ ಉತ್ತರ ಉಡಾಫೆಯಿಂದ ಕೂಡಿದೆ. ಕಳೆದ ಒಂದು ವರ್ಷದಿಂದ ಹೆಮ್ಮಾರಿ ಕರೋನಾ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು ರಾಜ್ಯ ಸರಕಾರ ಲಾಕ್ ಡೌನ್ ಮಾಡಿದ್ದರಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ ಇಂತಹ ಘನಘೋರ ಪರಿಸ್ಥಿತಿಯಲ್ಲಿ ಸಚಿವರ ಹೇಳಿಕೆ ಅಮಾನವೀಯವಾಗಿದೆ ಕೂಡಲೇ ಮುಖ್ಯಮಂತ್ರಿಗಳು ಉಮೇಶ ಕತ್ತಿ ಸಚಿವ ಸಂಪುಟದಿಂದ ಉಚ್ಚಾಟನೆಗೊಳಿಸಿ ಸಚಿವ ಕತ್ತಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ರಾಜ್ಯ ಅಲ್ಪಸಂಖ್ಯಾತ ಘಟಕದ ಸಂಯೋಜಕರಾದ ಅಶ್ಪಾಕ್ ಆರ್.ಮುಲ್ಲಾ ಆಗ್ರಹಿಸಿದ್ದಾರೆ.