(ಸಂಜೆವಾಣಿ ವಾರ್ತೆ)
ವಿಜಯಪುರ:ಜು.27: ಇತ್ತೀಚೆಗೆ ಜರುಗಿದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಿಂದ ವಂಚಿತರಾದ ಜಿಪಿಟಿ-ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮರು ಕೌನ್ಸಲಿಂಗ್ ನಡೆಸಲು ಒತ್ತಾಯಿಸಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ ಬಿ ಪಾಟೀಲ ಅವರಿಗೆ ಇಂದು ವಿಜಯಪುರದ ಅವರ ಗೃಹ ಕಚೇರಿಯಲ್ಲಿ ಜಿಲ್ಲೆಯ ಜಿಪಿಟಿ ಶಿಕ್ಷಕರು ಮನವಿ ಸಲ್ಲಿಸಿದರು.
ಸಚಿವರ ಮೂಲಕ ಶಿಕ್ಷಣ ಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಹಕ್ಕೊತ್ತಾಯವನ್ನು ಮಂಡಿಸಿ, ಸೂಕ್ತ ಕ್ರಮವಹಿಸಿ, ಕೌನ್ಸಲಿಂಗ್ ನಡೆಸಲು ಅವಕಾಶ ಕಲ್ಪಿಸಬೇಕೆಂಬ ಆಶಯ ಜಿಪಿಟಿ-ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರದ್ದಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಅತೀ ಶೀಘ್ರದಲ್ಲೇ ಶಿಕ್ಷಣ ಸಚಿವರ ಹಾಗೂ ಸರ್ಕಾರದ ಗಮನಕ್ಕೆ ತಂದು, ಈ ವರ್ಗಾವಣೆ ಸಮಸ್ಯೆಯನ್ನು ಸಮಂಜಸವಾಗಿ ಪರಿಹರಿಸಿ, ಜಿಪಿಟಿ-ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೌನ್ಸಲಿಂಗ್ ನಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಜಿಪಿಟಿ-
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹಕಾರಿ, ಆನಂದ ಕಂಬಾರ, ಮಹಾಂತೇಶ ಪಾಟೀಲ,ವಿದ್ಯಾನಂದ ಬಸರಗಿ, ಶಂಕರಗೌಡ ಪಾಟೀಲ,ಸತೀಶ ಬಗಲಿ,ಶಿವರಾಜ ಪಾಟೀಲ,ಆನಂದ ಕುಂಟೋಜಿ,ಸಂಗಮೇಶ ದುದಗಿ, ಮಾಧವಗುಡಿ,
ಹನಮಂತ್ರಾಯ ಪೂಜಾರಿ, ಸಂತೋಷ ಬಂಡೆ, ರೇಣುಕಾ ರೇಬಿನಾಳ, ಮಹಾದೇವ ಗಬಸಾವಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.